ಲಗೋರಿ ಎಂಬುದು ಭಾರತದ ಒಂದು ಜಾನಪದ ಕ್ರೀಡೆಯಾಗಿದೆ. ಇದನ್ನು ಲಿಂಗೋಚ ಎಂದೂ ಕರೆಯುತ್ತಾರೆ. ಮತ್ತೆ ಪಿತ್ತೋ (ರಾಜಸ್ಥಾನದಲ್ಲಿ) ಹಾಗೂ ಸಟೋಲಿಯ (ಮಧ್ಯಪ್ರದೇಶದಲ್ಲಿ) ಎನ್ನುತ್ತಾರೆ. ಇದು ಹೊರಾಂಗಣ ಆಟವಾಗಿದೆ. ಇದು ನಾಲ್ಕು ಮತ್ತು ಹೆಚ್ಚು ಜನ ಆಡುವ ಆಟ. ಇದಕ್ಕೆ ಬೇಕಾದ ರಗಳೆಂದರೆ, ಚೆಂಡು, ಚಪ್ಪಟೆ ಕಲ್ಲುಗಳು ಇತ್ಯಾದಿ. ಸರಳವಾದ ಆಟವನ್ನು ಸಮಯದ ಮಿತಿ ಇಲ್ಲದೆ ಆಡಬಹುದು. == ವಿವಿಧ ಹೆಸರು == ದೇಶದ ಇತರ ಭಾಗಗಳಲ್ಲಿ, ಇದೇ ಆಟವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ: ಲಗೋರಿ (ಕರ್ನಾಟಕ) ಲಿಂಗೋರ್ಚ, ಲಗೋರಿ (ಮಹಾರಾಷ್ಟ್ರ) ಪಿತ್ತು (ಹರ್ಯಾಣ, ಪಂಜಾಬ್, ಚಂಡೀಘಢ ಹಾಗೂ ಉತ್ತರ ರಾಜಸ್ತಾನ) ಸೈಟೋಲಿಯ (ರಾಜಸ್ಥಾನ, ಬಿಹಾರ) ಸಾತೋಡಿಯು (ಗುಜರಾತ್) ಪಿತ್ತು (ಪಶ್ಚಿಮ ಬಂಗಾಳ, ಬಿಹಾರ) ಬಮ್ ಪಿತ್ತೋ (ಬಿಹಾರ) ಎಡು ಪೆಂಕುಳತ, ಡಿಕೋರಿ ಅಥವಾ ಪಿತ್ತು (ಆಂಧ್ರಪ್ರದೇಶ) ಡಬ್ಬಾ ಕಲಿ (ಕೇರಳ, ತೆಂಗಿನ ಎಲೆಗಳು ಮಾಡಿದ್ದ ಚೆಂಡನ್ನು ಬಳಸಿ ಆಡಲಾಗುತ್ತದೆ) ಎಜ್ಹು ಕಲ್ಲು (ತಮಿಳುನಾಡು) ಗರ್ಮಾನ್ (ಕಾಶ್ಮೀರ) == ಆಡುವ ಕ್ರಮ == ಮನೆಯಂಗಳದಲ್ಲೋ, ಗದ್ದೆ ಬಯಲುಗಳಲ್ಲೋ ಹತ್ತಾರು ಮಕ್ಕಳು ಒಟ್ಟು ಸೇರಿದಾಗ ಹೆಂಚು ತುಂಡು, ಗೆರಟೆ, ಅಥವಾ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೆ ಒಂದು ಇಟ್ಟು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ರಬ್ಬರ್ ಚೆಂಡು ,ಅಲ್ಲದಿದ್ದರೆ ಹುಲ್ಲನ್ನು ಮುದ್ದೆಯಾಗಿ ಮಾಡಿ ಮೇಲೆ ಕಾಗದ ಸುತ್ತಿ ಬಾಳೆಗಿಡದ ಒಣಗಿದ ಹಗ್ಗವನ್ನು ನೀರಿನಲ್ಲಿ ಮುಳುಗಿಸಿ, ತೇವ ಮಾಡಿ ಅದನ್ನು ಗಟ್ಟಿಯಾಗಿ ಸುತ್ತಿ ಚೆಂಡು ಮಾಡಿ ಲಗೋರಿ ಪ್ರಾರಂಭವಾಗುತ್ತಿತ್ತು. ಹೀಗೆ ಮಾನವ ತನ್ನ ಬೌದ್ಧಿಕ ಶಕ್ತಿಯಿಂದ ಅದಕ್ಕೂಂದು ರೂಪಕೊಟ್ಟು ಆಡುವ ಆಟಗಳೇ ಜಾನಪದ ಕ್ರೀಡೆಗಳಾಗಿ ಬೆಳದು ಬಂದವು ಹಳ್ಳಿಹೈದರ ಆಟದ ವಿಶೇಷತೆಗಳ ಬಗ್ಗೆ ಪ್ರದೇಶಗಳಿಗೆ ಹೊಂದಿಕೊಂಡಂತೆ ಆಟಗಳನ್ನು ಆಡುವುದನ್ನು ನೋಡಿತ್ತೇವೆ ಕಣ್ಣು ಮುಚ್ಚಾಲೆ,ಮರಕೋತಿ,ಕುಂಟಾಟ,ಗೋಲಿ, ಚಿನ್ನಿದಾಂಡು,ಗಾಳಿಪಟ, ನೀರಿನಲ್ಲಿ ಆಡುವ ಪೀಂಕ ಆಟ ಮುಂತಾದ ಇನ್ನು ನುರಾರೂ ಆಟಗಳು ಆದರೆ ಈ ಎಲ್ಲಾ ಆಟಗಳು ಜನಪದದಿಂದ ಮರೆಯಾಗುತ್ತಿದೆ. ಈ ದೃಷ್ಟಿಯಿಂದ ಜನಪದದಿಂದ ಮರೆಯಾಗುತ್ತಿರುವ ಆಟಗಳಲ್ಲಿ ಒಂದು. == ಲಗೋರಿ ಆಟದ ನಿಯಮಗಳು == ನಿಯಮಗಳನ್ನು ಪಾಲಿಸಿ ಆಡಬೇಕಾಗುತ್ತದೆ ಅದರಲ್ಲಿ ಕೆಲವುಗಳು ಯಾವುದೆಂದರೇ ಆಟದಅಂಗಣ,ಅಂಗಣವನ್ನು ಅಥೀಕಾರಿಗಳು ಪರಿಶೀಲಿಸುವುದು ಅದಕ್ಕೆ ಉಪಹೋಗಿಸುವ ಸೂಕ್ತವಾದ ಸಲಕರಣೆಗಳು ಮತ್ತು ಅಂಗಣರಚಿಸುವುದು. ವಿವಿಧ ನಿಯಮಗಳು ಬಿಲ್ಡರ್ಸ್ ಹಾಗೂ ಫೀಲ್ಡರ್ಸ್ ನಿಯಮಗಳು ಆಟಗಾರರ ಬದಲಾವಣೆ ಪೌಲ್ಸ್(ತಪ್ಪುಗಳು), ದಂಡನೆ, ಟೈ(ಅಂಕ ಸಮವಾದಾಗ) ನಿಯಮಗಳನ್ನು ಲಗೋರಿ ಒಳಗೊಂಡಿದೆ. ಮೈದಾನದಲ್ಲಿ ಆಡುವ ಆಟ. ಎರಡು ತಂಡಗಳಿರುತ್ತವೆ. ಎರಡೂ ಗುಂಪಿನವರು ಕ್ರಿಕೆಟ್ ರಬ್ಬರ್ ಚೆಂಡನ್ನು ಹೆಚ್ಚಾಗಿ ಆಟಕ್ಕೆ ಬಳಸುತ್ತಾರೆ. ಈ ಆಟವಾಡಲು ನಾ‌ಲ್ಕು ಅಥವಾ ಹೆಚ್ಚು ಜನ ಇರಬೇಕು == ಕ್ರೀಡೆಯ ಮಹತ್ವ == ಭಾರತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ ಭಾರತೀಯರ ಒಂದೊಂದು ಆಚರಣೆಯ ಹಿಂದೆ ತನ್ನದ್ದೇ ಆದ ಒಂದು ಇತಿಹಾಸವಿದೆ. ನದಿ ಕಣಿವೆಗಳಲ್ಲಿ ಮಾನವ ಸಂಸ್ಕೃತಿ ಅರಳಿದಾಗ ಕ್ರೀಡೆಗೂ ಪ್ರಾಧ್ಯಾನತೆ ದೊರೆಯಿತು. ಇಂದು ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಿ ಹೋಗಿದೆ. ಕ್ರೀಡೆ ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಔಷಧಿಯೂ ಕೂಡ. ಮಕ್ಕಳ ಜಾಣ್ಮೆ,ಚಾತುರ್ಯ,ಧೈರ್ಯಶಕ್ತಿ ಹಾಗೂ ಕುತೂಹಲ ದೃಷ್ಟಿಗೆ ಅನುಗುಣವಾಗಿ ವಿವಿಧ ಆಟಗಳು ಬೆಳಕಿಗೆ ಬಂದಿದೆ. == ಬಾಹ್ಯ ಸಂಪರ್ಕಗಳು == ://.../?=+&=1366&=633&=&=&=&=&=0ahUKEwj1i9fIwdPQAhUIRY8KHVYDCI8QsAQIOg ://../?=CifWcTKJA7A == ಉಲ್ಲೇಖ ==