ಲತಾಂಗಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೩ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಗೀತಪ್ರಿಯ ಎಂದು ಹೆಸರಿಸಿದ್ದಾರೆ. .ಇದು ಹಿಂದೂಸ್ತಾನಿ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹನ್ನೊಂದನೆಯ ರುದ್ರ ಚಕ್ರದ ಮೂರನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಗೊ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನು ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೩ ಸ ಅವರೋಹಣ ಸ ನಿ೩ ದ೧ ಪ ಮ೨ ಗ೩ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು 27ನೆಯ ಮೇಳಕರ್ತ ರಾಗವಾದ ಸರಸಾಂಗಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಲತಾಂಗಿ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು, ಕೆಲವು ದಿನಮೆ ಸುದಿನಮು-ತ್ಯಾಗರಾಜ ಅಪರಾಧಮುಲ- ತ್ಯಾಗರಾಜ ಮರಿವೆರೆ - ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಪಿರವ ವರಮ್ ತಾರುಮ್- ಪಾಪನಾಶಮ್ ಶಿವನ್ ವೆಂಕಟರಮನ- ಪಾಪನಾಶಮ್ ಶಿವನ್ ಶ್ರಿಲಲಿತೆ ಶ್ರಿಕಾಂತಸಹಿತೆ- ಜಯಚಾಮರಾಜೇಂದ್ರ ವೊಡೆಯರ್ ತಾಮ್ರಲೋಚನಿ ಲತಾಂಗಿ- ಎಂ. ಬಾಲಮುರಳಿ ಕೃಷ್ಣ ಕೊಂಜುಮ್ ಸಾಲಂಗೈ ತಿಜಗುಮ್-ವರ್ಣ- ಮದುರೈ ಆರ್.ಮುರಳೀದರನ್ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಲತಾಂಗಿ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಸೂರ್ಯಕಾಂತಮತ್ತು ಸೇನಾವತಿ. == ಉಲ್ಲೇಖಗಳು ==