ಲಿಮಾ (/ˈliːmə/, : [ˈlima], : ಟೆಂಪ್ಲೇಟು:-, : [ˈlima]) ಪೆರುವಿನ ರಾಜಧಾನಿ ಮತ್ತು ದೊಡ್ಡ ನಗರ. ಇದು ಚಿಲ್ಲೋನ್, ರಿಮಾಕ್ ಮತ್ತು ಲುರಿನ್ ನದಿಗಳ ಕಣಿವೆಯಲ್ಲಿನ ನಗರ . 10 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಮಾವು ಪೆರುವಿನ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ನಗರವಾಗಿದೆ . ಸ್ಪೈನ್ ನ ಫ್ರಾನ್ಸಿಸ್ಕೋ ಪಿಝಾರ್ರೊ ಜನವರಿ 18, 1535 ರಂದು ಲಿಮಾವನ್ನು ಸ್ಥಾಪಿಸಿದನು. == ಸರ್ಕಾರ == === ರಾಷ್ಟ್ರೀಯ === ಲಿಮಾವು ರಿಪಬ್ಲಿಕ್ ಆಫ್ ಪೆರು ಮತ್ತು ಲಿಮಾ ಪ್ರಾಂತ್ಯದ ರಾಜಧಾನಿಯಾಗಿದೆ. ಹಾಗೆಯೇ, ಇದು ಪೆರು ಸರ್ಕಾರದ ಮೂರು ವಿಭಾಗಗಳಿಗೆ ನೆಲೆಯಾಗಿದೆ. ಕಾರ್ಯನಿರ್ವಾಹಕ ಶಾಖೆಯು ಪ್ಲಾಜಾ ಮೇಯರ್ನಲ್ಲಿನ ಸರ್ಕಾರಿ ಅರಮನೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ, ಎಲ್ಲಾ ಸಚಿವಾಲಯಗಳು ಈ ನಗರದಲ್ಲಿವೆ. ಶಾಸಕಾಂಗ ಶಾಖೆಯು ಲೆಜಿಸ್ಲೇಟಿವ್ ಪ್ಯಾಲೇಸ್ನಲ್ಲಿದೆ ಮತ್ತು ಪೆರುವಿನ ಗಣರಾಜ್ಯದ ಕಾಂಗ್ರೆಸ್ನ ನೆಲೆಯಾಗಿದೆ. ನ್ಯಾಯಾಂಗ ಶಾಖೆಯು ಪಾಲೆಸ್ ಆಫ್ ಜಸ್ಟಿಸ್ ನಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ, ಮತ್ತು ಪೆರು ಸರ್ವೋಚ್ಚ ನ್ಯಾಯಾಲಯಕ್ಕೆ ನೆಲೆಯಾಗಿದೆ. == == === ===