ಲೂಪಸ್ ಎನ್ನುವುದು ದಕ್ಷಿಣಾಕಾಶದ ನಕ್ಷತ್ರಪುಂಜಗಳ ಪೈಕಿ ಒಂದು (ವೃಕ). ಸನ್ನಿಹಿತ ಸ್ಥಾನ: ವಿಷುವದಂಶ 15ಗಂ.; ಘಂಟಾವೃತ್ತಾಂಶ 450 ದಕ್ಷಿಣ. ಇದರಲ್ಲಿ ನಾಲ್ಕನೆಯ ಕಾಂತಿಮಾನಕ್ಕೆ ಮೇಲ್ಪಟ್ಟ 8 ನಕ್ಷತ್ರಗಳಿವೆ. ಆಲ್ಫ ಲೂಪಿ ಎಂಬುದು ಪ್ರಧಾನ ತಾರೆ (ಕಾಂತಿಮಾನ 2.32). ರೋಹಿತ ಪ್ರರೂಪ B2. ಸೂರ್ಯನಿಂದ 430 ಬೆಳಕುವರ್ಷಗಳ ದೂರದಲ್ಲಿದೆ. ಬೀಟ ಕೆ ಕುವಾನ್ ಎಂಬುದರ ಕಾಂತಿವರ್ಗ 2.69. ರೋಹಿತ ಪ್ರರೂಪ B2. ಸೂರ್ಯನಿಂದ 540 ಬೆಳಕುವರ್ಷಗಳ ದೂರದಲ್ಲಿದೆ. ಕಾಂತಿಮಾನ 5ಕ್ಕೆ ಮೇಲ್ಪಟ್ಟ ಇತರ ಐದು ನಕ್ಷತ್ರಗಳು ಈ ಪುಂಜದಲ್ಲಿವೆ. ಕೆಲವೊಂದು ಯಮಳನಕ್ಷತ್ರಗಳೂ, ನೀಹಾರಿಕೆಗಳೂ ಇವೆ. == ಉಲ್ಲೇಖಗಳು ==