ಲೆಬನನ್ (ಅರಾಬಿಕ್ ಲಿಪಿಯಲ್ಲಿ : لبنان ) ( ಅಧಿಕೃತವಾಗಿ ಲೆಬನನ್ ಗಣರಾಜ್ಯ ) ಪಶ್ಚಿಮ ಏಷ್ಯಾದ ಒಂದು ಚಿಕ್ಕ ಪರ್ವತಮಯ ರಾಷ್ಟ್ರ. ಲೆಬನನ್ ಮೆಡಿಟರೇನಿಯನ್ ಸಮುದ್ರದ ಪೂರ್ವದ ತೀರದಲ್ಲಿನ ದೇಶ. ಲೆಬನನ್‌ನ ಉತ್ತರ ಮತ್ತು ಪೂರ್ವದಲ್ಲಿ ಸಿರಿಯ ಮತ್ತು ದಕ್ಷಿಣಕ್ಕೆ ಇಸ್ರೇಲ್ ದೇಶಗಳಿವೆ. ನಾಡಿನ ರಾಜಧಾನಿ ಬೈರೂತ್.