ಲೀಖ್ಟೆನ್‌ಸ್ಟೈನ್ ಸಂಸ್ಥಾನ ಪಶ್ಚಿಮ ಯುರೋಪ್‌ನ ಆಲ್ಪ್ಸ್ ಪರ್ವತಪ್ರಾಂತ್ಯದ ಒಂದು ರಾಷ್ಟ್ರ. ಇದರ ಪಶ್ಚಿಮದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಪೂರ್ವದಲ್ಲಿ ಆಸ್ಟ್ರಿಯ ದೇಶಗಳಿವೆ. ಸಂಪೂರ್ಣ ಪರ್ವತಮಯವಾದ ಲೀಖ್ಟೆನ್‌ಸ್ಟೈನ್ ಹಿಮದ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.