ಲೈಬೀರಿಯ, ಅಧಿಕೃತವಾಗಿ ಲೈಬೀರಿಯ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದನ್ನು ಸಿಯೆರ್ರ ಲಿಯೊನ್, ಗಿನಿ, ಕೋತ್ ದ್'ಇವ್ವಾರ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳು ಸುತ್ತುವರೆದಿವೆ. ಇಲ್ಲಿನ ಹೆಚ್ಚು ಜನ ಸಾಂದ್ರತೆ ಇರುವ ಕಡಲು ಪ್ರದೇಶ ಮ್ಯಾನ್ಗ್ರೊವ್ ಕಾಡುಗಳನ್ನು ಹೊಂದಿದೆ. ೧೯೮೯ರಿಂದ ಈ ದೇಶದ ಬಹಳ ಅಸ್ಥಿರತೆಯನ್ನು ಕಂಡಿದೆ. ಆಗಿನಿಂದ ಉಂಟಾದ ಎರಡು ಅಂತಃಕಲಹಗಳಲ್ಲಿ ಸಹಸ್ರಾರು ಜನರನ್ನು ಬೀದಿಪಾಲು ಮಾಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ತೀವ್ರವಾಗಿ ಕುಂಠಿತಗೊಳಿಸಿವೆ.