ಲೋಚೊ ಮೂಲತಃ ಸೂರತ್‍ನದ್ದಾದ ಆವಿಯಲ್ಲಿ ಬೇಯಿಸಿದ ಒಂದು ಗುಜರಾತಿ ಫ಼ರ್ಸಾಣ್ (ಲಘು ಆಹಾರ/ಪಕ್ಕ ಖಾದ್ಯ). ಇದನ್ನು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ಸಡಿಲವಾದ ಸಾಂದ್ರತೆ ಮತ್ತು ಅಸಮ ಆಕಾರದಂತಹ ಹಿಟ್ಟಿನ ಉಂಡೆಗಳಿಂದ ಈ ಖಾದ್ಯಕ್ಕೆ ಈ ಹೆಸರು ಬಂದಿದೆ. ಸ್ವಲ್ಪಮಟ್ಟಿಗೆ ಇದು ಖಮನ್‍ಗೆ ಸಂಬಂಧಿಸಿದೆ. ಆದರೆ ಖಮನ್‍ನಂತೆ ಇದನ್ನು ಸಮ ಆಕಾರದ ಕತ್ತರಿಸಿದ ತುಂಡುಗಳಾಗಿ ಬಡಿಸಲಾಗುವುದಿಲ್ಲ. ಹಲವುವೇಳೆ ಇದರ ಮೇಲೆ ಎಣ್ಣೆ ಸಿಂಪಡಿಸಲಾಗುತ್ತದೆ ಮತ್ತು ಬೆಣ್ಣೆ, ಸೇವ್, ಸಂಬಾರ ಪದಾರ್ಥಗಳು, ಕೊತ್ತಂಬರಿ, ಈರುಳ್ಳಿ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ. ಲೋಚೊವನ್ನು ಸೂರತ್ ನಗರದಲ್ಲಿ ವ್ಯಾಪಕವಾಗಿ ತಿನ್ನಲಾಗುತ್ತದೆ. ಈ ಫ಼ರ್ಸಾಣ್ ಸೂರ್ತಿ ಲೋಚೊ ಎಂದು ಜನಪ್ರಿಯವಾಗಿದೆ. ಇದು ನವಸಾರಿ ಮತ್ತು ದಕ್ಷಿಣ ಗುಜರಾತ್‍ನಲ್ಲಿನ ಇತರ ಪ್ರದೇಶಗಳಲ್ಲಿ ಕೂಡ ಬಹಳ ಜನಪ್ರಿಯವಾಗಿದೆ. ಈ ಪ್ರದೇಶಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿ ಸೇವ್ ಖಮನಿ ಎಂದು ಪರಿಚಿತವಾಗಿದೆ. == ಉಲ್ಲೇಖಗಳು ==