ವನಸ್ಪತಿ(ರಾಗ) ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ನಾಲ್ಕನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಭಾನುಮತಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಪ್ರಥಮ "ಇಂದು" ಚಕ್ರದ ಚತುರ್ಥ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೨ ನಿ೨ ಸ' ಅವರೋಹಣ ಸ' ನಿ೨ ದ೨ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. ರಸಾಳಿ,ವನಾವಳಿ,ವಿಠಲಪ್ರಿಯ ಇವುಗಳಲ್ಲಿ ಪ್ರಮುಖವಾದುದು. 1 ಭಾನುಮತಿ. ನಿ೨ ಸ ಮ೧ ಪ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೨ ಸ 2 ರಸಾಳಿ ಸ ರಿ೧ ಮ೧ ಪ ದ೨ ನಿ೨ ಸ ಸ ದ೨ ಪ ಮ೧ ರಿ೧ ಸ 3 ವನಾವಳಿ. ಸ ರಿ೧ ಮ೧ ಪ ದ೨ ನಿ೨ ಸ ಸ ದ೨ ಪ ಮ೧ ರಿ೧ ಸ 4 ವಿಠ್ಠಲಪ್ರಿಯ ಸ ರಿ೧ ಮ೧ ಪ ದ೨ ಸ ಸ ದ೨ ಪ ಮ೧ ರಿ೧ ಸ == ಜನಪ್ರಿಯ ರಚನೆಗಳು == ಪರಿಯಾಚಕಮ - ತ್ಯಾಗರಾಜರು, ಈಶ್ವರೀ ಜಗದೀಶ್ವರೀ - ಬಾಲಮುರಳಿ ಕೃಷ್ಣ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಸುಧಾರಾಣಿಯವರ "ಪರಿಯಾಚಕಮ"ಗಾಯನ