ವನಾಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಮೃದುವಾದ ಈ ಲೋಹ ಮುಖ್ಯವಾಗಿ ಕೆಲವು ಮಿಶ್ರಲೋಹಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜೀವಜಾತಿಗಳಲ್ಲಿ ಕಂಡುಬರುವ ೨೬ ಧಾತುಗಳಲ್ಲಿ ಇದೂ ಒಂದು. ಈ ಲೋಹವನ್ನು ಮೆಕ್ಸಿಕೊ ನಗರದಲ್ಲಿ ೧೮೦೧ರಲ್ಲಿ ಆಂಡ್ರೆಸ್ ಮಾನುಯೆಲ್ ಡೆಲ್ ರಿಯೊ ಎಂಬಾತ ಮೊದಲು ಶುದ್ಧೀಕರಿಸಿದ. ಸ್ಕ್ಯಾಂಡಿನೇವಿಯದ ರೂಪದ ದೇವತೆ "ವನಾಡಿಸ್" ಇದರ ಹೆಸರಿಗೆ ಪ್ರೇರಣೆ.