ಲಿಖಿತ ವರದಿಗಳು ಒಂದು ನಿರ್ದಿಷ್ಟ ವಾಚಕವೃಂದಕ್ಕೆ ಕೇಂದ್ರೀಕೃತ, ಮಹತ್ವದ ಒಳಅಂಶಗಳನ್ನು ನೀಡುವ ದಸ್ತಾವೇಜುಗಳು. ವರದಿಗಳನ್ನು ಹಲವುವೇಳೆ ಒಂದು ಪ್ರಯೋಗ, ತನಿಖೆ, ಅಥವಾ ವಿಚಾರಣೆಯ ಫಲಿತಾಂಶವನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ವಾಚಕವೃಂದವು ಸಾರ್ವಜನಿಕ ಅಥವಾ ಖಾಸಗಿ, ಒಬ್ಬ ವ್ಯಕ್ತಿ ಅಥವಾ ಒಟ್ಟಾರೆ ಜನತೆಯಾಗಿರಬಹುದು.