ವರ್ತೂರು ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಉಪನಗರ. ಹಿಂದೆ ವರ್ತೂರು ಒಂದು ಹೋಬಳಿಯಾಗಿತ್ತು. ಆದರೆ ಈಗ ಅದು ಬೄಹತ್ ಬೆಂಗಳೂರು ಮಹಾನಗರದ ಒಂದು ಭಾಗ. ಇದು ನಗರದ ಒಂದು ವಿಧಾನಸಭಾ ಕ್ಷೇತ್ರ ಕೂಡ ಆಗಿದೆ.ಶ್ರೀ ಚನ್ನರಾಯಸ್ವಾಮಿ ದೇವಾಸ್ತನವು ಪ್ರಸಿದ್ಧಿಯಾಗಿದ್ದು ರಥಸಪ್ತಮಿ ಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.