ವಸುಧೇಂದ್ರ ಕನ್ನಡ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ೧೯೬೯ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ೨೦ ವರ್ಷಗಳ ಕಾಲ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರುಲ್ಲಿ ವಾಸವಾಗಿದ್ದು ಸದ್ಯಕ್ಕೆ ಖಾಸಗಿಯಾಗಿ ಹಲವಾರು ಕೆಲಸ ಮತ್ತು ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. == ಕೃತಿಗಳು == === ಕಥಾಸಂಕಲನಗಳು === ಮನೀಷೆ (1998) ಯುಗಾದಿ (2004) ಚೇಳು (2006) ಹಂಪಿ ಎಕ್ಸ್‌ಪ್ರೆಸ್ (2008) ಮೋಹನಸ್ವಾಮಿ (2013) ವಿಷಮ ಭಿನ್ನರಾಶಿ (2017) === ಲಲಿತ ಪ್ರಬಂಧಗಳು === ಕೋತಿಗಳು (2004) ನಮ್ಮಮ್ಮ ಅಂದ್ರೆ ನಂಗಿಷ್ಟ (2006) ರಕ್ಷಕ ಅನಾಥ (2010) ವರ್ಣಮಯ (2012) ಐದು ಪೈಸೆ ವರದಕ್ಷಿಣೆ (2016) === ಕಾದಂಬರಿ === ಹರಿಚಿತ್ತ ಸತ್ಯ (2010) ತೇಜೋ-ತುಂಗಭದ್ರಾ (2020) ರೇಷ್ಮೆ ಬಟ್ಟೆ (ಅಕ್ಟೋಬರ್ 2024) === ಅನುವಾದ === ಮಿಥುನ (ಶ್ರೀರಮಣರ ತೆಲುಗು ಕತೆಗಳ ಅನುವಾದ) (2004) ಎವರೆಸ್ಟ್‌ (ಜಾನ್‌ ಕ್ರಾಕೌರ್‌ರ ’ ' ನ ಕನ್ನಡ ಅನುವಾದ) (2015) === ವಿಜ್ಞಾನ === ಇ-ಕಾಮರ್ಸ್ === ಬ್ರೈಲ್‌ ಲಿಪಿಯಲ್ಲಿನ ಪುಸ್ತಕ === ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ) (2006) === ಚಲನಚಿತ್ರ ಸಾಹಿತ್ಯ === ನಮ್ಮಮ್ಮ ಅಂದ್ರೆ ನಂಗಿಷ್ಟ (ಕತೆ, ಚಿತ್ರಕತೆ, ಸಂಭಾಷಣೆ - ತಯಾರಿಯಲ್ಲಿದೆ) == ಪ್ರಶಸ್ತಿಗಳು == ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಗಳಗನಾಥ ಪ್ರಶಸ್ತಿ ದ.ರಾ. ಬೇಂದ್ರೆ ಕಥಾ ಪ್ರಶಸ್ತಿ ಮಾಸ್ತಿ ಕಥಾ ಪುರಸ್ಕಾರ ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸೇಡಂನ ಅಮ್ಮ ಪ್ರಶಸ್ತಿ ಕಥಾರಂಗಂ ಪ್ರಶಸ್ತಿ ಚಡಗ ಕಾದಂಬರಿ ಪ್ರಶಸ್ತಿ - ೨೦೨೦ (ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ‘ತೇಜೋ ತುಂಗಭದ್ರಾ‌’ ಕಾದಂಬರಿಗೆ) ಗಳಗನಾಥ ಪ್ರಶಸ್ತಿ == ಪ್ರಕಾಶನ == ಛಂದ ಪುಸ್ತಕ’ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ನಾಡಿನ ಹಲವಾರು ಹೊಸ ಬರಹಗಾರರನ್ನು ಗುರುತಿಸಿದ್ದಾರೆ. == ವೈಯುಕ್ತಿಕ ಆಸಕ್ತಿಗಳು == ಚಾರಣದಲ್ಲಿ ಆಸಕ್ತಿಯಿರುವ ಇವರು ನಮ್ಮ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಹಲವು ಬೆಟ್ಟಗಳನ್ನೂ ಮತ್ತು ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನು ಹತ್ತಿದ್ದಾರೆ. ಪ್ರತಿ ನಿತ್ಯ ಸ್ಕ್ವಾಷ್ ಆಡುತ್ತಾರೆ. ಪ್ರಪಂಚದ ಒಳ್ಳೆಯ ಚಿತ್ರಗಳನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾರೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾರೆ. == ಲೈಂಗಿಕ ಅಲ್ಪಸಂಖ್ಯಾತರ ಚಳುವಳಿ == ವಸುಧೇಂದ್ರರು ಲೈಂಗಿಕ ಅಲ್ಪಸಂಖ್ಯಾತರ(ಎಲ್.ಜಿ.ಬಿ.ಟಿ.) ಸ್ಥಳೀಯ ಸಂಸ್ಥೆಯಾದ ದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಸಲಿಂಗಕಾಮಿ ಹಕ್ಕುಗಳಿಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಕನ್ನಡ ದಿನಪತ್ರಿಕೆ ವಿಶ್ವವಾಣಿಯ ಇತ್ತೀಚಿನ ಸಂದರ್ಶನದಲ್ಲಿ, ಹೆಚ್ಚಿನ ಜನರು ಸಂತಾನೋತ್ಪತ್ತಿಗಷ್ಟೇ ಅಲ್ಲದೇ ವಿನೋದಕ್ಕಾಗಿ ಸಹ ಲೈಂಗಿಕಕ್ರಿಯೆಯನ್ನು ಬಳಸಿಕೊಳ್ಳುತ್ತಾರೆ. ಅಲ್ಲದೇ, ಸಲಿಂಗಕಾಮಿಗಳ ವಿರುದ್ಧ ದಬ್ಬಾಳಿಕೆಯನ್ನು, ದಲಿತರ ವಿರುದ್ಧದ ದಬ್ಬಾಳಿಕೆಗೆ ಹೋಲಿಸಬಹುದು ಎಂದು ಅಭಿಪ್ರಾಯ ಪಡುತ್ತಾರೆ. "'ಗೇ'ಗಳ ಬದುಕಿನ ಕಡಲಲಿ ಅಳು–ನಗುವಿನ ಹಾಯಿದೋಣಿ", ಪ್ರಜಾವಾಣಿಯ ಲೇಖನದಲ್ಲಿ ತಮಾಷೆಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತ, ಲೈಂಗಿಕ ಅಲ್ಪಸಂಖ್ಯಾತರ ಬೇಸರದ ಕ್ಷಣಗಳಿಗೂ ಕನ್ನಡಿ ಹಿಡಿದಿದ್ದಾರೆ. "ಮೋಹನಸ್ವಾಮಿ", ತಮ್ಮದೇ ಕಥೆ ಎಂದು ಗೊತ್ತಾದರೆ ಜನ ಹೇಗೆ ಸ್ವೀಕರಿಸಿಯಾರು ಎಂಬ ಭಯವಿದ್ದರಿಂದ, ಮೊದಲು ಬೇರೆ ಹೆಸರಿನಲ್ಲಿ ಪ್ರಕಟಿಸಲು ತೀರ್ಮಾನಿಸಿದ್ದರು. ಕೊನೆಯಲ್ಲಿ ತಮ್ಮದೇ ಹೆಸರಿನಲ್ಲಿ ಪ್ರಕಟಿಸುವ ಮೂಲಕ ತಾವು ಒಬ್ಬ ಸಲಿಂಗಿ ಎನ್ನುವ ಸತ್ಯವನ್ನು ಪ್ರಪಂಚದೊಂದಿಗೆ ಹಂಚಿಕೊಂಡರು. . ಪ್ರಜಾವಾಣಿಯ ಸಂದರ್ಶನದಲ್ಲಿ "ಹದಿನೆಂಟು ವರ್ಷಕ್ಕೆ ಆಗಬೇಕಿದ್ದ ವಿಮೋಚನೆ ನಲವತ್ತೈದನೇ ವಯಸ್ಸಿಗೆ ಆಯ್ತು. ನನ್ನಂತೆ ಇನ್ನೊಂದು ಮಗು ಕಷ್ಟ ಪಡಬಾರದು. ಕೆಲವು ಮಕ್ಕಳು ತಮ್ಮ ಸಂಕಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗಾಗಬಾರದು" ಎಂದು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದರು. == ಉಲ್ಲೇಖಗಳು ==