== ವಾಟೆ == ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು. == ಕನ್ನಡದಲ್ಲಿ == ಉಂಡೆ ಹುಳಿ, ವಂಟಿಮರ. == ಇತರ ಭಾಷೆಯಲ್ಲಿ == ಲಕೂಚ, ಮಂಕಿ ಜಾಕ್ (ಇಂ), ಬರಲ್(ಹಿಂ), ಕಮ್ಮ ರೇಗು(ತೆ). == ಸಸ್ಯ ಶಾಸ್ತ್ರೀಯ ವಿಂಗಡಣೆ == ಆರ್ಟೋಕಾರ್ಪಸ್ ಲಕೂಚ ( ) == ಕುಟುಂಬ == ಮೊರೇಸಿ () == ಹಣ್ಣಾಗುವ ಕಾಲ == ಫೆಬ್ರವರಿ-ಎಪ್ರಿಲ್ == ಪೌಷ್ಟಿಕಾಂಶಗಳು == ಶರ್ಕರಪಿಷ್ಟ, ಕಬ್ಬಿಣ, ಪ್ರೋಟೀನ್, ಖನಿಜಾಂಶ == ಆಹಾರ ಪದಾರ್ಥಗಳು == ಹುಳಿಪುಡಿ, ಉಪ್ಪಿನಕಾಯಿ, ಚಟ್ನಿ, ಹುಣಸೆ ಹಣ್ಣಿನ ಬದಲಾಗಿ ಬಳಕೆ. == ಔಷಧಿಯ ಗುಣಗಳು == ಹಣ್ಣು ವಾತ ಮತ್ತು ಪಿತ್ತಹರ. ಇದು ರಕ್ತವರ್ಧಕ. ಅತಿಯಾದ ಸೆವನೆ ಮಲಬದ್ಧತೆಗೆ ಕಾರಣ. ತೊಗಟೆ ಚರ್ಮರೋಗಕ್ಕೆ ಉಪಯೋಗ. ಬೀಜ ಮತ್ತು ಹಾಲ್ರಸ ಉತ್ತಮ ವಿರೇಚಕ. ಹಣ್ಣಿನ ತಿರುಳಿನಿಂದ ಯಕೃತಿಗೆ ಪೋಷಣೆ. == ಸಸ್ಯ ಮೂಲ ಸ್ವರೂಪ == ಇದರ ಮೂಲ ಭಾರತ. ಅಂಡಾಕಾರದ ದೂಡ್ಡ ಎಲೆಗಳು ಒರಟು ಕೆಂಪು ಕಂದು ಚಿಪ್ಪಿನಂತಹ ತೊಗಟೆಯ ೨೦-೨೫ ಮೀಟರ್ ಎತ್ತರ ಬೆಳೆಯುವ ಮರ. ಕ್ರಿಕೆಟ್ ಚೆಂಡಿನ ಗಾತ್ರದ ಬೂದು ಬಣ್ಣದ ಹಣ್ಣಿನಲ್ಲಿ ಕಿತ್ತಳೆ ವರ್ಣದ ಹುಳಿ ತಿರುಳು ಪುಟ್ಟ ಬಿಳಿ ಬೀಜಗಳು. ಎಲೆ ತೂಟ್ಟು, ಕತ್ತರಿಸಿದ ಕಾಯಿಯಿಂದ ಬಿಳಿ ಅಂಟು ಒರೆಸುವಿಕೆ. == ಸಸ್ಯ ಪಾಲನೆ == ಪಶ್ಚಿಮ ಘಟ್ಟಗಳಲ್ಲಿ ಮತ್ತು ಪರ್ಣಪಾತಿ ಕಾಡುಗಳಲ್ಲಿ ಕಂಡುಬರುವ ಮರ. ಬೀಜಗಳಿಂದ ಬೇರಿನಿಂದ ಧಾರಕ ಸಸಿಗಳಿಓದ ಸಸ್ಯಾಭಿವೃದ್ಧಿ.ಬೀಜದ ಮೂಳಕೆಯೊಡೆಯುವ ಸಾಮರ್ಥ್ಯ ತೀರಾ ಕಡಿಮೆ ಅವಧಿಯವರೆಗೆ. ನೇಪಾಳದಲ್ಲಿ ಮೇವಿಗಾಗಿ ಇದರ ಪಾಲನೆ == ವಿಶಿಷ್ಟತೆ == ವಾಟೆ ಹಣ್ಣು ಅಳಿಲು, ಕೋತಿ ಮತ್ತು ಹಕ್ಕಿಗಳಿಗೆ ಇಷ್ಟ್ತ. ಪೀಠೋಪಕರಣ, ದೋಣಿ ಮತ್ತು ರೈಲ್ವೆ ಸ್ಲೀಪರ್ ತಯಾರಿಕೆಯಲ್ಲಿ ವಾಟೆಮರದ ಬಳಕೆ. ತೊಗಟೆ ಮತ್ತುನ್ ಬೇರಿನಿಂದ ಬಣ್ಣ ತಯಾರಿಕೆ. == ಉಲ್ಲೇಖ ==