ವಾನರ ಎಂದರೆ ಪ್ರೈಮೇಟ್ ಗಣದ ಆಂತ್ರಪ್ರಾಯ್ಡಿಯ ಗುಂಪಿಗೆ ಸೇರಿದ ಬೃಹತ್ ಕಪಿ (ಏಪ್). ಇದರಲ್ಲಿ ಗಿಬ್ಬನ್, ಒರಾಂಗೂಟಾನ್, ಗೊರಿಲ್ಲ ಮತ್ತು ಚಿಂಪ್ಯಾಂಜಿ ಎಂಬ ನಾಲ್ಕು ಜಾತಿಗಳುಂಟು. ಮೊದಲೆರಡು ಮಂಗಗಳು ಏಷ್ಯಕ್ಕೂ ಉಳಿದವೆರಡು ಆಫ್ರಿಕಕ್ಕೂ ಸೀಮಿತವಾಗಿವೆ. ಗಿಬ್ಬನ್: ಆಗ್ನೇಯ ಏಷ್ಯವಾಸಿಯಾದ ಗಿಬ್ಬನ್ ಮಂಗನ ಕೆಲವು ಲಕ್ಷಣಗಳನ್ನುಳಿಸಿಕೊಂಡಿದ್ದರೂ ಮಾನವನಂತೆ ದ್ವಿಪಾದಿ. ಆದರೆ ಕಾಲುಗಳನ್ನು ನೆಟ್ಟಗೆ ಇಡದೆ ಮಡಚಿಕೊಂಡೇ ಇರುತ್ತದೆ. ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತ ಸಸ್ಯಾಹಾರಿಯಾಗಿದ್ದರೂ ಹುಳಹುಪ್ಪಟೆ, ಹಕ್ಕಿ ಮತ್ತು ಅದರ ಮೊಟ್ಟೆಗಳನ್ನು ತಿನ್ನುತ್ತದೆ. ಒರಾಂಗೂಟಾನ್: ಸುಮಾತ್ರ-ಬೋರ್ನಿಯೊ ದ್ವೀಪ ವಾಸಿಯಾದ ಒರಾಂಗೂಟಾನ್ ಮರಗಳ ಮೇಲೆ ವಾಸಿಸುತ್ತ ಕೊಂಬೆಯಿಂದ ಕೊಂಬೆಗೆ ನೆಗೆಯುವುದರಲ್ಲಿ ನಿಷ್ಣಾತ. ಸಸ್ಯಾಹಾರಿಯಾಗಿದ್ದು ಅರಣ್ಯಫಲಗಳನ್ನು ತಿನ್ನುತ್ತದೆ. ಗೊರಿಲ್ಲ: ಆಫ್ರಿಕದ ಮಧ್ಯಪ್ರದೇಶವಾಸಿಯಾದ ಗೊರಿಲ್ಲ ಅತ್ಯಪೂರ್ವವಾದ್ದು. ಬೃಹತ್ ಮಂಗಗಳಲ್ಲಿ ಅದೇ ಅತ್ಯಂತ ದೊಡ್ಡದು. ನೆಲದ ಮೇಲೆ ವಾಸಿಸುವ ಇದು ಚತುಷ್ಟಾದಿಯಾಗಿದ್ದರೂ ಹಿಂಗಾಲುಗಳ ಮೇಲೆ ನಿಲ್ಲಬಲ್ಲದು. ಇದು ಕೂಡ ಸಸ್ಯಹಾರಿ. ಚಿಂಪ್ಯಾಂಜಿ: ಚಿಂಪ್ಯಾಂಜಿ ಆಫ್ರಿಕದ ಉಷ್ಣಪ್ರದೇಶವಾಸಿ. ಮರಗಳ ಮೇಲೆ ನೆಗೆಯುತ್ತ ವೇಗವಾಗಿ ಚಲಿಸಬಲ್ಲದು. ಅನೇಕ ಬಗೆಯ ಸಸ್ಯಗಳನ್ನು ತಿನ್ನುತ್ತದೆ. ಇದು ಹಲವು ವಿಧವಾದ ಶಬ್ದಗಳನ್ನು ಮಾಡಬಲ್ಲುದಾದರೂ ಮಾತನಾಡಲಾರದು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == . ( 2000). " : ". . . . . ... 97 (20): 10684–6. :2000PNAS...9710684P. :10.1073/.210390497. 34045. 10995486. . () – , ( 2016).