== ಜೀವನಚರಿತ್ರೆ == ವಾಲಿ ೨೯ ಅಕ್ಟೋಬರ್ ೧೯೩೧ರಲ್ಲಿ ಶ್ರೀರಂಗಂನ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಇವರು ತಮಿಳಿನ ಕವಿ ಮತ್ತು ಸಾಹಿತಿ ಹಾಗೂ ತಮಿಳು ಚಿತ್ರರಂಗದಲ್ಲಿ ಐದು ದಶಕದ ದೀರ್ಘಾವಧಿಯ ಸಂಬಂಧವನ್ನು ಹೊಂದಿದ್ದು ೧೫೦೦೦ ಗೀತೆಗಳನ್ನು ಬರೆದಿದ್ದಾರೆ. ಅವರು ಸತ್ಯ, ಹೇ ರಾಮ್, ಪಾರತಾಳೆ ಪರವಸಂ ಮತ್ತು ಪೊಯಕಳ್ ಕುಧಿರಯ್ ಎಂಬ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾರತ ಸರ್ಕಾರ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿದೆ. ಇವರು ಜುಲೈ ೧೮,೨೦೧೩ ರಲ್ಲಿ ನಿಧನರಾದರು. ವಾಲಿ ತಮಿಳು ಚಿತ್ರೋದ್ಯಮದಲ್ಲಿ ಅವಕಾಶಕ್ಕಾಗಿ ೧೯೫೦ ರಲ್ಲಿ ಮದ್ರಾಸಿಗೆ ತೆರಳಿದರು. ೧೯೬೦ ಮತ್ತು ೧೯೭೦ರ ಅವಧಿಯಲ್ಲಿ ನಟ ಎಂ. ಜಿ. ರಾಮಚಂದ್ರನ್‌ರಿಂದ ಪ್ರೋತ್ಸಾಹವನ್ನು ಪಡೆದು ಯಶಸ್ವಿ ಸಾಹಿತಿಯಾಗಿ, ಅವರು ತಮ್ಮ ಸಮಕಾಲೀನ ಕವಿ ಕಣ್ಣದಾಸನ್‌ಗೆ ಪೈಪೋಟಿನೀಡಿದ್ದಾರೆ. ಅವರ 'ನಾನುಮ್ ಇಂದ ನಾಟ್ರುಂಡಮ್' ಎಂಬ ಆತ್ಮಚರಿತ್ರೆಯಲ್ಲಿ ಈ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ವಾಲಿ ಅವರು ಅವತಾರ ಪುರಷ್ಂ, ಪಾಂಡವರ್ ಭೂಮಿ, ರಾಮಾನುಜ ಕವಿಯಂ, ಕೃಷ್ಣ ವಿಜಯಂ, ತಮಿಳ್ ಕಡವುಲ್, ಕಲೈನಾರ್ ಕವಿಯಂ, ಕೃಷ್ಣ ಭಕ್ತಂ ಮತ್ತು ವಾಲಿಭಾ ವಾಲಿ ಹಾಗೂ ಇತರೆ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಒಂದು ಹಾಡು "ಅಮ್ಮ ಎನಡ್ರು ಆಜ಼್ಹೈಕತ ಉಯಿರ್ ಇಲ್ಲೈಯ್" ಮಧುರೈ ದೇವಾಲಯದಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಅವರು ರಾಮಚಂದ್ರನ್‌ಗೆ ೬೩ ಚಿತ್ರಗಳಲ್ಲಿ ಮತ್ತು ಶಿವಾಜಿ ಗಣೇಶನ್‌ರಿಗೆ ೭೦ ಚಿತ್ರಗಳಲ್ಲಿ ಹಾಡುಗಳನ್ನು ಬರೆದಿದ್ದಾರೆ. ಅವರು ೧೫೦೦೦ಕ್ಕಿಂತ ಅನೇಕ ತಮಿಳು ಹಾಡುಗಳನ್ನು ಬರೆದಿದ್ದಾರೆ. == ಕೃತಿಗಳು == } == ನಟರಾಗಿ == ೨೦೦೧-ಪಾರತಾಳೆ ಪರವಶಂ(ತಮಿಳು) ೨೦೦೦-ಹೇ ರಾಮ್(ತಮಿಳು) ೧೯೮೮-ಸತ್ಯ(ತಮಿಳು) ೧೯೮೩-ಪೊಯಕಳ್ ಕುಧಿರೈ(ತಮಿಳು) == ನಿದೇ೯ಶಕರಾಗಿ == ವಾಡೈಮಾಲೈ == ಬರಹಗಾರರಾಗಿ == ೧೯೭೯-ಕಾಡವುಲ್ ಅಮೈಥ ಮೆದೈ(ತಮಿಳು),ಸ್ಕ್ರೀನ್ ಪ್ಲೆ, ಡೈಲಾಗ್ಸ್ ೧೯೮೭-ಒರೆ ಒರು ಗ್ರಾಮಥಿಲೈ == ಪ್ರಶಸ್ತಿಗಳು == ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳು ೧೯೭೦-ಎನಗಳ್ ತಂಗಮ್ ೧೯೭೯-ಇವರಗಳ್ ವಿಧ್ಯಾಸಮನವರಗಳ್ ೧೯೮೯-ವರುಷಂ ಪಧಿನಾರು ಮತ್ತು ಅಪೂರ್ವ ಸಗೋಧರರ್ಗಳ್ ೧೯೯೦-ಕೆಳದಿಯ ಕಣ್ಮಣಿ ೨೦೦೮-ದಶಾವತಾರಮ್ ೨೦೦೭-ಪದ್ಮಶ್ರೀ. == ಉಲ್ಲೇಖಗಳು ==