ವಿಂಧ್ಯಾವಳಿ , ಹಿಂದೂ ಗ್ರಂಥಗಳ ಪ್ರಕಾರ ಅಸುರ ರಾಜ ಮಹಾಬಲಿಯ ಪತ್ನಿ. ಈಕೆಯನ್ನು ಬಾಲಿಕಾ ಅಥವಾ ಚಾರುತಿ ಎಂದು ಸಹ ಕರೆಯುತ್ತಾರೆ. ಬಾಣಾಸುರ ಮತ್ತು ನಮಸ್ಸು ಎಂಬ ಇಬ್ಬರು ಗಂಡು ಮಕ್ಕಳು ಹಾಗೂ ರತ್ನಮಾಲಾ ಎಂಬ ಹೆಸರಿನ ಮಗಳು ಸೇರಿದಂತೆ ನೂರು ಮಕ್ಕಳ ಸಂತತಿಯನ್ನು ಮಹಾಬಲಿ ಮತ್ತು ವಿಂಧ್ಯಾವಳಿ ದಂಪತಿ ಹೊಂದಿದ್ದರು. == ದಂತಕಥೆ == ಹಿಂದೂ ಪುರಾಣಗಳ ಪ್ರಕಾರ, ಅಸುರ ರಾಜನಾಗಿದ್ದ ಮಹಾಬಲಿಯು ವಿರೋಚನನ ಮಗ ಮತ್ತು ಪ್ರಹ್ಲಾದನ ಮೊಮ್ಮಗ. ಮಹಾಬಲಿಯ ಪತ್ನಿ ವಿಂಧ್ಯಾವಳಿಯನ್ನು ಹಿಮವನ್‌ನ ಮಗಳು ಎಂದು ಗುರುತಿಸಲಾಗಿದೆ. ವಿಂಧ್ಯಾವಳಿಯನ್ನು ಸದ್ಗುಣಶೀಲೆ ಮತ್ತು ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದ ಮಹಿಳೆ ಎಂಬುದಾಗಿ ಉದಾಹರಿಸಿರುವುದನ್ನು ಕೆಲವು ಉಲ್ಲೇಖಗಳಲ್ಲಿ ಗಮನಿಸಬಹುದಾಗಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ವಿಂಧ್ಯಾವಳಿಯ ಉಲ್ಲೇಖವಿರುವುದು ಸ್ವಲ್ಪ ಕಡಿಮೆ. ವಿಂಧ್ಯಾವಳಿಯನ್ನು ಸುಂದರ ಮತ್ತು ಸಹಾನುಭೂತಿಯುಳ್ಳವಳು ಎಂದು ವರ್ಣಿಸಲಾಗಿದೆ. ಇದು, ಅವಳಿಗೆ ಎಲ್ಲಾ ಜೀವಿಗಳ ಬಗ್ಗೆ ಇದ್ದ ಕಾಳಜಿಯ ಮನೋಭಾವವನ್ನು ಪ್ರದರ್ಶಿಸುತ್ತದೆ. ಕೆಲವು ಕಥನಗಳು ಮಹಾಬಲಿ-ವಿಂಧ್ಯಾವಳಿ ದಂಪತಿಗಳು ಪ್ರಸಿದ್ಧ ಬಾಣಾಸುರ ಮತ್ತು ನಮಸ್ಸು ಸೇರಿದಂತೆ ನೂರು ಪುತ್ರರ ಜನನಕ್ಕೆ ಕಾರಣರಾದರು ಎಂದು ಹೇಳುತ್ತವೆ. ಮಹಾಬಲಿಗೆ ಆದರ್ಶಪ್ರಾಯ ಪತ್ನಿಯಾಗಿದ್ದ ವಿಂಧ್ಯಾವಳಿಯು ತನ್ನ ನೂರು ಜನ ಗಂಡು ಮಕ್ಕಳಿಗೂ ಸಮಾನ ಪ್ರೀತಿಯನ್ನು ತೋರುತ್ತಿದ್ದಳೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ವಿಂಧ್ಯಾವಳಿ ಮಹಾಬಲಿಯ ಅಜ್ಜ ಪ್ರಹ್ಲಾದನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಳು. ವಿಂಧ್ಯಾವಳಿ ಒಮ್ಮೆ ಕೃಷ್ಣನ ಕೋಪದಿಂದ ಬಾಣಾಸುರನನ್ನು ರಕ್ಷಿಸಿದಳು ಎಂದೂ ನಂಬಲಾಗಿದೆ. == ಇದನ್ನೂ ನೋಡಿ == ವಾಮನ. ಮಹಾಬಲಿ ಬಾಣಾಸುರ ರತ್ನಮಾಲಾ ವಿಷ್ಣು ಪ್ರಹ್ಲಾದ == ಉಲ್ಲೇಖಗಳು ==