ವಿಕಾಸ ಎಂದರೆ ಕ್ರಮಾಗತ ಪೀಳಿಗೆಗಳ ಆಚೆಗೆ ಜೈವಿಕ ವಾಸಿಗಳ ಆನುವಂಶಿಕ ಗುಣಲಕ್ಷಣಗಳಲ್ಲಿನ ಬದಲಾವಣೆ. ಈ ಗುಣಲಕ್ಷಣಗಳು ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹೆತ್ತವರಿಂದ ಸಂತತಿಗೆ ವರ್ಗಾಯಿಸಲ್ಪಟ್ಟ ವಂಶವಾಹಿಗಳ ಅಭಿವ್ಯಕ್ತಿಗಳಾಗಿರುತ್ತವೆ. ಯಾವುದೇ ನಿರ್ದಿಷ್ಟ ಜೀವಿಸಮೂಹದಲ್ಲಿ ವ್ಯತ್ಯಯನ, ಆನುವಂಶಿಕ ಪುನಃಸಂಯೋಜನೆ ಹಾಗೂ ಆನುವಂಶಿಕ ಮಾರ್ಪಾಡಿನ ಇತರ ಮೂಲಗಳ ಪರಿಣಾಮವಾಗಿ ವಿಭಿನ್ನ ಗುಣಲಕ್ಷಣಗಳು ಇರುವ ಸಾಧ್ಯತೆ ಇರುತ್ತದೆ. (ಲೈಂಗಿಕ ಆಯ್ಕೆ ಸೇರಿದಂತೆ) ನೈಸರ್ಗಿಕ ಆಯ್ಕೆ ಮತ್ತು ಆನುವಂಶಿಕ ಚಲನೆಯಂತಹ ವಿಕಾಸಾತ್ಮಕ ಪ್ರಕ್ರಿಯೆಗಳು ಈ ವ್ಯತ್ಯಯನದ ಮೇಲೆ ಕಾರ್ಯನಿರ್ವಹಿಸಿದಾಗ ವಿಕಾಸ ಸಂಭವಿಸುತ್ತದೆ. ಪರಿಣಾಮವಾಗಿ ಒಂದು ಜೀವಿಸಮೂಹದೊಳಗೆ ನಿರ್ದಿಷ್ಟ ಗುಣಲಕ್ಷಣಗಳು ಹೆಚ್ಚು ಸಾಮಾನ್ಯ ಅಥವಾ ಅಪರೂಪವಾಗುತ್ತವೆ. == ಉಲ್ಲೇಖಗಳು ==