ವಿಕಾಸ್‍ಪೀಡಿಯ ಎನ್ನುವುದು ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಒಂದು ಆನ್‍ಲೈನ್ ಮಾಹಿತಿ ಮಾರ್ಗದರ್ಶಕ ತಾಣ. ಹೈದರಾಬಾದ್ ಸಿ-ಡ್ಯಾಕ್ ಸಂಸ್ಥೆಯಿಂದ ಕಾರ್ಯಗತಗೊಳಿಸಲ್ಪಟ್ಟಿರುವ ಇದು ಭಾರತ ಕೇಂದ್ರ ಸರ್ಕಾರದ 'ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ'ದ, ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಇಲಾಖೆಯಿಂದ ನಡೆಸಲ್ಪಡುತ್ತಿದೆ. ಈ ಜಾಲತಾಣವು ೨೩ ಭಾಷೆಗಳಲ್ಲಿ ಇದೆ. ಆ ಭಾಷೆಗಳೆಂದರೆ: ಅಸ್ಸಾಮಿ, ಬಂಗಾಳಿ, ಗುಜರಾತಿ, ಬೋಡೋ, ಡೋಂಗ್ರಿ, ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಸಂಸ್ಕೃತ, ಕಾಶ್ಮೀರಿ, ಹಿಂದಿ, ಕೊಂಕಣಿ, ನೇಪಾಳಿ, ಒಡಿಯಾ, ಉರ್ದು, ಮೈಥಿಲಿ, ಮಣಿಪುರಿ, ಸಂತಲಿ, ಸಿಂಧಿ, ಮಲಯಾಳಂ, ಪಂಜಾಬಿ ಮತ್ತು ಮರಾಠಿ. ೧೮ಫೆಬ್ರವರಿ೨೦೧೪ರಂದು ಇದು ಪ್ರಾರಂಭವಾಯಿತು. ಇದರಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಸಮಾಜಕಲ್ಯಾಣ, ಇಂಧನ, ಇ-ಆಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಿವೆ. ಈ ವಿಕಾಸ್‍ಪೀಡಿಯ ಎನ್ನುವ ಹೆಸರು 'ವಿಕಾಸ್' (ಬೆಳವಣಿಗೆ, ಅಭಿವೃದ್ಧಿ) ಮತ್ತು ಎನ್‍ಸೈಕ್ಲೋಪೀಡಿಯ (ವಿಶ್ವಕೋಶ)ದ 'ಪೀಡಿಯ' ಎಂಬ ಪದಗಳನ್ನು ಕೂಡಿಸಿದ್ದಾಗಿದೆ. == ಉಲ್ಲೇಖಗಳು == == ಹೊರಕೊಂಡಿಗಳು == ವಿಕಾಸ್‍ಪೀಡಿಯ ಅಧಿಕೃತ ಜಾಲತಾಣ ಕನ್ನಡ ವಿಕಾಸ್‍ಪೀಡಿಯ