ವಿಕಿಮೇನಿಯಾ(ವಿಕಿಮಾನಿಯಾ ಎಂದೂ ಕರೆಯುತ್ತಾರೆ.) ವಿಕಿಮೀಡಿಯಾ ಚಳುವಳಿಯ ವಾರ್ಷಿಕ ಸಮ್ಮೇಳನವಾಗಿದ್ದು, ಸ್ವಯಂಸೇವಕ ಸಮುದಾಯಗಳು ಮತ್ತು ಮತ್ತು ವಿಕಿಮೀಡಿಯಾ ಫೌಂಡೇಶನ್- ಇವೆರಡೂ ಸೇರಿ ಆಯೋಜಿಸುವ ಒಂದು ಬೃಹತ್ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ನಡೆಯುವ ಈ ಸಮ್ಮೇಳನದಲ್ಲಿ, ವಿಕಿಪೀಡಿಯ ಅಲ್ಲದೆ ವಿಕಿಮೀಡಿಯಾ ಪ್ರತಿಷ್ಠಾನವು ನಿರ್ವಹಿಸುವ ಇತರೆ ಯೋಜನೆಗಳು (ವಿಕಿಕೋಟ್ಸ್, ವಿಕಿವಾಯೇಜ್, ವಿಕಿಸೋರ್ಸ್, ವಿಕಿನ್ಯೂಸ್, ವಿಕಿಬುಕ್ಸ್ ಇತ್ಯಾದಿ), ಮುಕ್ತ ತಂತ್ರಾಂಶಗಳು, ಮುಕ್ತ ಜ್ಞಾನ ಮತ್ತು ಮತ್ತು ಇವುಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಪರಸ್ಪರ ಚರ್ಚಿಸಲಾಗುತ್ತದೆ. ೨೦೨೧ನೇ ಇಸವಿಯ ವಿಕಿಮೇನಿಯಾವನ್ನು ೨೦೨೧ರ ಅಗಸ್ಟ್ ೧೩ ರಿಂದ ೧೭ವರೆಗೆ ಆನ್‌ಲೈನ್ ವೇದಿಕೆಯ ಮೂಲಕ ನಡೆಸಲಾಗುತ್ತದೆ. ಮೂಲತಃ ಅಗಸ್ಟ್ ೨೦೨೦ರಂದು, ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಮತ್ತು ಕೊನೆಗೆ ಈ ಸಮ್ಮೇಳನವನ್ನು ರದ್ದುಗೊಳಿಸಲಾಯಿತು. == ಈ ಹಿಂದೆ ನಡೆದಿದ್ದ ಸಮ್ಮೇಳನಗಳ ಪಟ್ಟಿ == == ಸಮ್ಮೇಳನಗಳ ಪಕ್ಷಿನೋಟ == == ಉಲ್ಲೇಖಗಳು ==