== ಅರ್ಥ: == ಕೇಂದ್ರೀಕರಣದಿಂದ ಕೆಲವೇ ಮಂದಿ ಅಧಿಕಾರ ನಿರ್ವಹಿಸುವ ಬದಲು ಅಧೀನ ಸಿಬ್ಬಂಧಿಗಳೆಲ್ಲರೂ ನಿರ್ವಹಿಸುವುದಕ್ಕೆ ವಿಕೇಂದ್ರೀಕರಣ ಎನ್ನುವರು. === ವ್ಯಾಖ್ಯೆ: === ಲೂಯಿಸ್ ಅಲೆನ್ ರವರ ಪ್ರಕಾರ "ವಿಕೇಂದ್ರೀಕರಣವೆಂದರೆ ಕೇಂದ್ರೀಯವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಹೊರತುಪಡಿಸಿ,ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೆಳಹಂತದ ಎಲ್ಲಾ ವರ್ಗದವರಿಗೂ ನೀಡುವ ವ್ಯವಸ್ಥಿತ ಪ್ರಯತ್ನವಾಗಿದೆ. === ವಿಕೇಂದ್ರೀಕರಣದ ಪ್ರಾಮುಖ್ಯತೆಗಳು: === ===== ೧.ಶೀಘ್ರ ನಿರ್ಧಾರ ಸಾಧ್ಯ: ===== ವ್ಯವಸ್ಥಾಪಕರು ತಮ್ಮ ನಿಗದಿತ ಕಾರ್ಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ. ===== ೨.ಪ್ರಜಾಪ್ರಭುತ್ವ ವ್ಯವಸ್ಥೆ: ===== ಇದು ಅಧಿಕಾರ & ಜವಬ್ದಾರಿಗಳನ್ನು ವ್ಯವಸ್ಥಾಪಕರಿಗೆ ಹಂಚಿಕೆ ಮಾಡುತ್ತದೆ.ಇದರಿಂದ ಅಧಿಕಾರ ಕೇಂದ್ರೀಕರಣ ನಿಲ್ಲುವುದು &ಆಡಳಿತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಾಗುವುದು. ===== ೩.ಮೇಲಾಧಿಕಾರಿಗಳ ಕೆಲಸದ ಹೊರೆ ಕಡಿಮೆ: ===== ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೆಳಹಂತದವರೆಗೂ ಹಂಚಿಕೆಯಾಗುವುದರಿಂದ ಮೇಲಾಧಿಕಾರಿಗಳ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ. ===== ೪.ನೌಕರರಿಗೆ ಉತ್ತೇಜನ: ===== ನೌಕರರು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಕರ್ತವ್ಯದಲ್ಲಿ ತೃಪ್ತಿ ದೊರಕುತ್ತದೆ. ===== ೫.ಬೆಳವಣಿಗೆಗೆ ಸಹಕಾರಿ: ===== ಇದು ನೌಕರರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತದೆ. ===== ೬.ನಿರ್ವಾಹಕ ವಿಕಸನ: ===== ಸರಿಯಾದ ಸಮಯಕ್ಕೆ,ಅಧೀನ ಸಿಬ್ಬಂಧಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.