ವಿಕ್ರಮೋರ್ವಶೀಯಮ್ ಕಾಳಿದಾಸ ರಚಿಸಿರುವ ಸಂಸ್ಕೃತ ನಾಟಕ. ವಿಕ್ರಮ ಎಂದು ಬಿರುದಾಂಕಿತನಾದ ಪುರೂರವ ಮತ್ತು ಅಪ್ಸರೆ ಊರ್ವಶಿಯ ನಡುವಿನ ಪ್ರೇಮ ಪ್ರಕರಣವು ಇದರಲ್ಲಿ ಚಿತ್ರಿತವಾಗಿದೆ.