ವಿಜಯ್‍ಪುರ್ (ಹಿಂದಿ:विजयपुर) (ಅಧಿಕೃತವಾಗಿ ಬಿಜಯ್‍ಪುರ್ ಎಂದು ಕರೆಯಲ್ಪಡುತ್ತದೆ) ಒಂದು ಗಿರಿಧಾಮ ಮತ್ತು ಹಳ್ಳಿಯಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ ಜಿಲ್ಲೆಯಲ್ಲಿದೆ. ಇದು ಬಾಗೇಶ್ವರ್-ಚೌಕೋರಿ ಹೆದ್ದಾರಿ ಪಕ್ಕದ ದಟ್ಟವಾದ ಪೈನ್ ಕಾಡುಗಳ ನಡುವೆ ಸ್ಥಿತವಾಗಿದೆ. == ಆಸಕ್ತಿಯ ಸ್ಥಳಗಳು == === ಧೌಲಿನಾಗ್ ದೇವಸ್ಥಾನ === ಧೌಲಿನಾಗ್ ದೇವಾಲಯವು ವಿಜಯ್‍ಪುರ್ ಪರ್ವತದ ತುದಿಯಲ್ಲಿದೆ. ಭಕ್ತರು ಮುಖ್ಯವಾಗಿ ನವರಾತ್ರಿಯ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಪಂಚಮಿ ಜಾತ್ರೆಯು ಇಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಸಿದ್ಧ ಹಬ್ಬವಾಗಿದೆ. === ಚಹಾ ತೋಟಗಳು === ವಿಜಯ್‍ಪುರ್‌ನಲ್ಲಿನ ಚಹಾ ಎಸ್ಟೇಟ್‍ನ್ನು ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರು ಸ್ಥಾಪಿಸಿದರು. == ಛಾಯಾಂಕಣ == == ಉಲ್ಲೇಖಗಳು ==