ವಿದ್ಯಾರ್ಥಿವೇತನವು ಒಬ್ಬ ವಿದ್ಯಾರ್ಥಿಗೆ ತನ್ನ ಶಿಕ್ಷಣವನ್ನು ಮುಂದುವರಿಸಲು ನೀಡಲಾಗುವ ಆರ್ಥಿಕ ನೆರವಿನ ಬಹುಮಾನವಾಗಿರುತ್ತದೆ. ವಿದ್ಯಾರ್ಥಿವೇತನಗಳನ್ನು ವಿವಿಧ ಮಾನದಂಡಗಳನ್ನು ಆಧರಿಸಿ ನೀಡಲಾಗುತ್ತದೆ. ಇವು ಸಾಮಾನ್ಯವಾಗಿ ಆ ಬಹುಮಾನದ ದಾನಿ ಅಥವಾ ಸಂಸ್ಥಾಪಕನ ಮೌಲ್ಯಗಳು ಮತ್ತು ಉದ್ದೇಶಗಳನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಯು ಮರಳಿ ಕೊಡಬೇಕಾಗಿರುವುದಿಲ್ಲ. == ಪ್ರಕಾರಗಳು == ಅತ್ಯಂತ ಸಾಮಾನ್ಯ ವಿದ್ಯಾರ್ಥಿವೇತನಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು: ಅರ್ಹತೆ ಆಧಾರಿತ: ಈ ಬಹುಮಾನಗಳು ವಿದ್ಯಾರ್ಥಿಯ ಶೈಕ್ಷಣಿಕ, ಕಲಾತ್ಮಕ, ಕ್ರೀಡಾ ಅಥವಾ ಇತರ ಸಾಮರ್ಥ್ಯಗಳ ಮೇಲೆ ಆಧಾರಿತವಾಗಿರುತ್ತವೆ. ಅಗತ್ಯತೆ ಆಧಾರಿತ: ಖಾಸಗಿ ಅಗತ್ಯತೆ ಆಧಾರಿತ ಬಹುಮಾನಗಳು ವಿದ್ಯಾರ್ಥಿ ನಿರ್ದಿಷ್ಟ: ಇವನ್ನು ಪಡೆಯಲು ಅರ್ಜಿದಾರರು ಲಿಂಗ, ಜನಾಂಗ, ಧರ್ಮ, ಕುಟುಂಬ, ಮತ್ತು ವೈದ್ಯಕೀಯ ಚರಿತ್ರೆ, ಅಥವಾ ಅನೇಕ ಇತರ ವಿದ್ಯಾರ್ಥಿ ನಿರ್ದಿಷ್ಟ ಅಂಶಗಳನ್ನು ಆಧರಿಸಿ ಅರ್ಹತೆ ಹೊಂದಬೇಕು. ವೃತ್ತಿಜೀವನ ನಿರ್ದಿಷ್ಟ: ನಿರ್ದಿಷ್ಟ ಅಧ್ಯಯನ ಕ್ಷೇತ್ರದಲ್ಲಿ ತೊಡಗಲು ಯೋಜಿಸಿರುವ ವಿದ್ಯಾರ್ಥಿಗಳಿಗೆ ಕಾಲೇಜು ಅಥವಾ ವಿಶ್ವವಿದ್ಯಾಲಯವು ನೀಡುವ ವಿದ್ಯಾರ್ಥಿವೇತನ. ಕಾಲೇಜ್ ನಿರ್ದಿಷ್ಟ: ಅತ್ಯಂತ ಅರ್ಹ ಅರ್ಜೀದಾರರಿಗೆ ಪ್ರತ್ಯೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನೀಡುವ ವೇತನ. ಕ್ರೀಡಾ ವಿದ್ಯಾರ್ಥಿವೇತನ: ಒಂದು ಕ್ರೀಡೆಯಲ್ಲಿ ಅಸಾಧಾರಣ ಕೌಶಲವನ್ನು ಹೊಂದಿದವರಿಗೆ ನೀಡಲಾಗುತ್ತದೆ. ಬ್ರ್ಯಾಂಡ್ ಸ್ಕಾಲರ್‌ಷಿಪ್: ಇವನ್ನು ಒಂದು ಬ್ರ್ಯಾಂಡ್ ಪ್ರಾಯೋಜಿಸುತ್ತದೆ. ಸೃಜನಾತ್ಮಕ ಸ್ಪರ್ಧೆಯ ವಿದ್ಯಾರ್ಥಿವೇತನ: ಸೃಜನಾತ್ಮಕ ಸಲ್ಲಿಕೆಯನ್ನು ಆಧರಿಸಿ ಇವನ್ನು ನೀಡಲಾಗುತ್ತದೆ. == ಉಲ್ಲೇಖಗಳು ==