ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ. == ಉಲ್ಲೇಖ ==