ವಿಶ್ವಾಂಬರಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೪ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ವಂಶವತಿ ಎಂದು ಹೆಸರಿಸಿದ್ದಾರೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಒಂಬತ್ತನೆಯ ಬ್ರಹ್ಮ ಚಕ್ರದ ಆರನೆಯ ರಾಗ.ಇದರ ನೆನೆಪಿನ ಹೆಸರು ಬ್ರಹ್ಮ-ಷಾ ನೆನಪಿನ ನುಡಿಕಟ್ಟು:ಸ ರ ಗು ಮಿ ಪ ಧು ನು ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೨ ಪ ದ೩ ನಿ೩ ಸ ಅವರೋಹಣ ಸ ನಿ೩ ದ೩ ಪ ಮ೨ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ 'ಷಡ್ಜ, ಶುದ್ಧ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಷಟ್‍ಶ್ರುತಿ ಧೈವತಮತ್ತು ಕಾಕಲಿ ನಿಷಾಧ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ವಿಶ್ವಾಂಬರಿಯಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ವಂಶವತಿ ಶಿವ ಯುವತಿಮತ್ಥು ಭಕ್ತವತ್ಸಲಮ್- ಮುತ್ತುಸ್ವಾಮಿ ದೀಕ್ಷಿತರ್ ಪರಮಾನಂದ-ಕೋಟೀಶ್ವರ ಐಯರ್ ವಿಜಯತಮ್ ಶ್ರೀ ರಾಜರಾಜೇಶ್ವರಿ - ಮೈಸೂರು ಜಯಚಾಮರಾಜ ವೊಡೆಯರ್ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ವಿಶ್ವಾಂಬರಿ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಶಾಮಲಾಂಗಿ ಮತ್ತು ಗಾನಮೂರ್ತಿ == ಉಲ್ಲೇಖಗಳು ==