ವಿಸಂಧಿ (ಪ್ರಕೃತಿ ಭಾವ) / ವಿರುದ್ಧೋವಾವಿಗತ: ಸಂಧಿ. ಸಂದಿ ಮಾಡಬೇಕಾದಲ್ಲಿ ಸಂಧಿಯಾಗದಿರುವುದು ವಿಸಂಧಿ. ಸ್ವರಕ್ಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ. ಇದಕ್ಕೆ ಪ್ಪಕೃತಿಭಾವ(ವಿಸಂಧಿ) ಎಂದು ಹೆಸರು. == ವಿಸಂಧಿಯಾಗುವ ಸಂದರ್ಭ == === ಅರಮೆ === ಎಲೆ (?), ಹೋ, ಅರೆ ಮೊದಲಾದ ನಿಪಾತಗಳಿಗೆ ಸ್ವರ ಪರವಾದಾಗ ವಿಸಂಧಿ ಆಗುತ್ತದೆ. ಉದಾ : ಅರಮೆ ಅರಲ್ದ ಬಯಲ್ದಾವರೆ, ಓಹೋ ಇರಲಿಂ ಪರವರ ಮಹಾತ್ಮ್ಯಂ === ಅವಧಾರಣೆ === ವಿಶಂಕೆ, ಮೆಚ್ಚಿಕೆ, ಆಕ್ಷೇಪ ಇವುಗಳನ್ನು ಸೂಚಿಸುವ ಎ [ಏ], ಒ[ಓ] ಹಳಿಗೆ ಸ್ವರ ಪರವಾದಾಗ, ಉದಾ: ಅವಧಾರಣೆ : ‘ಧನವುಳ್ಳನಾವನಾತನೆ ಇಂದ್ರಂ’ ವಿಶಂಕೆ : ‘ಆನೆಯೋ ಅದ್ರಿಯೋ’ ಮೆಚ್ಚಿಕೆ : ‘ಏನೇನೋ ಓದಿನ ಪರಿ ಲೇಸು ಲೇಸು’ ಆಕ್ಷೇಪ : ‘ಮುತ್ತಿದನೋ ಇಂದೆ ಕೋಂಟೆ ಧೂಳೀಪಟಂ’ === ಪ್ಲುತ === ಪ್ಲುತಕ್ಕೆ ಸ್ವರ ಪರವಾದಾಗ ವಿಸಂಧಿ. ಉದಾ : ‘ಹಾ ರಾಮಾ ! ಎಂದು ಸೀತೆ ಬಾಯಳಿದಳ್’ ‘ಎಮ’ ಶಬ್ದಕ್ಕೆ ಸ್ವರ ಪರವಾದಾಗ, ಉದಾ : ‘ಸಿಂಗವಕ್ಕೆಮ ಅಂಜೆಂ’ ‘ಗಡ’ ಎಂಬ ಅರ್ಥದ ‘ಆ’ಕಾರಕ್ಕೆ ಸ್ವರ ಪರವಾದಾಗ, ಉದಾ : ‘ಪಾಲ ಅಮರ್ದಾ ಇನಿದು ಗಡಾ’ ನಿರ್ದೇಶಾರ್ಥಕವಾದ ಆಕಾರಕ್ಕೆ ಅ ಮತ್ತು ಆ ಪರವಾದಾಗ, ಉದಾ : ‘ಆ ಅರಸಂ’, ‘ಆ ಆಳ್’ ಸಮಾಸದಲ್ಲಿ ಪೊಸ, ಪೊರ, ಒಳ, ಎಳ, ಪಳ ಎಂಬ ಶಬ್ದ ರೂಪಗಳಿಗೆ ಸ್ವರಾದಿಯಾದ ಶಬ್ದವು ಪರವಾದಾಗ, ಉದಾ: ಪೊಸ ಒಕ್ಕೆಲ್, ಪೊಸ ಊರ್, ಒಳ ಅಟ್ಟಂ, ಎಳ ಅಂಚೆ, ಪಳ ಅಲಗು. == ಉಲ್ಲೇಖ ==