== ಪೌರಾಣಿಕ ಹಿನ್ನೆಲೆ == ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಜಟೆಯನ್ನು ನೆಲಕ್ಕೆ ಹೊಡೆದಾಗ ವೀರಭದ್ರ ಜನಿಸುತ್ತಾರೆ.. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ತದನಂತರ ಶಿವನ ಆಜ್ಞೆಯಂತೆ ಕರ್ನಾಟಕದ ಕದಳಿವನದಲ್ಲಿ ಬಂದು ನೆಲೆಸುತ್ತಾನೆ. ಅದೇ ಮುಂದೆ ಬಾಳೆಹೊನ್ನೂರು ಎಂದು ಪ್ರಸಿದ್ಧವಾಗಿದೆ. ಶ್ರೀ ವೀರಭದ್ರೇಶ್ವರ ದೇವಾಲಯ. ಗದಗ ಜಿಲ್ಲೆ ಮುಂಡರಗಿ ತಾಲೂಕಾ ಶ್ರೀಕ್ಷೇತ್ರ ಸಿಂಗಟಾಲೂರಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿ ಗುಡ್ಡದ ಮೇಲೆ ನೆಲಸಿರುವ ವೀರಭದ್ರೇಶ್ವರ ಸುತ್ತಮುತ್ತಲಿನ ಗ್ರಾಮದ ಜನತೆಯ ಕುಲದೇವನಾಗಿ ಅವರ ಹಿತವನ್ನು ಕಾಯುವನು. == ಉಲ್ಲೇಖ ==