=== ವೀರಮ್ಮ === ದಯಾವೀರನೆಂಬ ಖ್ಯಾತಿಗೆ ಪಾತ್ರನಾಗಿದ್ದ ದಸರಯ್ಯ ಎಂಬುವವರ ಧರ್ಮಪತ್ನಿ. ಇವರಿಬ್ಬರು ಕಾಮಗೊಂಡಕ್ಕೆ ಸೇರಿದವರು. ಈಕೆ ಶಿವಾನುಭವಿ, ಸಾತ್ವಿಕಳು, ಅಹಿಂಸೆಯನ್ನು ತನ್ನ ಜೀವನ ಮೌಲ್ಯವಾಗಿಸಿಕೊಂಡು, ಅಷ್ಟಾವರಣಗಳ ಮಹತ್ವ, ಶರಣರ ನಿಲುವು, ಭಕ್ತರ ಡಾಂಬಿಕ ರೀತಿ-ನೀತಿ, ಮನದ ಚಾಂಚಲ್ಯವನ್ನು ಖಂಡಿಸಿದ್ದಾಳೆ. ವ್ರತನಿಷ್ಠೆ, ಪಾದೋದಕ, ಪ್ರಸಾದಗಳು, ಮನದ ಚಾಂಚಲ್ಯ ಮತ್ತು ಶರಣರ ನಿಲುವುಗಳಿಗೆ ಈಕೆ ಮಹತ್ಚ ನೀಡಿದ್ದಾಳೆ. ಬೆಳಗಿನ ವೇಳೆಯನ್ನರಿಯುವ ಕೋಳಿಯಂತೆ ವ್ರತನಿಷ್ಠರನ್ನು ಅರಿತು ಭಕ್ತ ಬೆರೆಯ ಬೇಕೆನ್ನುತ್ತಾಳೆ. ವೀರಮ್ಮನ ಎರಡು ದೀರ್ಘ ವಚನಗಳು ಮಾತ್ರ ಲಭ್ಯವಿವೆ. ಈಕೆಯ ವಚನಗಳ ಅಂಕಿತ "ನಿಜಗುರು ಶಾಂತೇಶ್ವರ".