ವೃಶ್ಚಿಕ ರಾಶಿಯು ಸೂರ್ಯ, ಚಂದ್ರ ಮತ್ತು ಗ್ರಹಗಳ ಕಕ್ಷೆಗಳ ಸೀಮಿತವಾಗಿರುವಂತೆ ಭಾಸವಾಗುವ 12 ನಕ್ಷತ್ರಪುಂಜಗಳ (ಇವುಗಳಿಗೆ ರಾಶಿಗಳೆಂದು ಹೆಸರು) ಇಕ್ಕಟ್ಟು ಪಟ್ಟಿಯಲ್ಲಿ ಕಾಣುವ ಮತ್ತು ಹೆಸರಿಗೂ ಆಕಾರಕ್ಕೂ ಸಾಮ್ಯವಿರುವ ನಕ್ಷತ್ರರಾಶಿ (ಸ್ಕಾರ್ಪಿಯಸ್). ಈ ಇಕ್ಕಟ್ಟು ಪಟ್ಟಿಯ ಹೆಸರು ರಾಶಿಚಕ್ರ. ಮೇಷದಿಂದ ತೊಡಗುವ ರಾಶಿಚಕ್ರದಲ್ಲಿ 7 ನೆಯದು ವೃಶ್ಚಿಕ. == ಮುಖ್ಯ ನಕ್ಷತ್ರಗಳು == ಇದರ ವಿಶಾಲ ಆಕಾರವನ್ನು ಲೇಪಿಸುವ ಸುಮಾರು 12-13 ನಕ್ಷತ್ರಗಳ ಪೈಕಿ ಎದ್ದು ಕಾಣುವುದು ಜ್ಯೇಷ್ಠಾ (ಅಂಟಾರೆಸ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್). ಚೇಳಿನ (ವೃಶ್ಚಿಕ) ತಲೆಭಾಗದ (ಅಂದರೆ ಪಶ್ಚಿಮ ಕಡೆಗಿರುವ) ಸುಮಾರು 3 ನಕ್ಷತ್ರಗಳ ಬಾಗು ರೇಖೆಗೆ ಅನೂರಾಧಾ (ಅಕ್ರ್ಯಾಬ್) ಎಂದೂ ಕೊಂಡಿಬಾಲ ಭಾಗದ ಸುಮಾರು 5 ನಕ್ಷತ್ರಗಳಿಗೆ ಒಟ್ಟಾಗಿ ಮೂಲಾ (ಶೌಲಾ) ಎಂದು ಹೆಸರು. ಜ್ಯೇಷ್ಠಾ ಸೂರ್ಯನಿಂದ 550 ಜ್ಯೋತಿರ್ವರ್ಷ ದೂರದಲ್ಲಿದೆ. ಇದೊಂದು ರಕ್ತ ಅತಿದೈತ್ಯ ತಾರೆ. ಸೌರವ್ಯಾಸದ 300 ಮಡಿ ಇದೆ ಇದರ ವ್ಯಾಸ! ಉಜ್ಜ್ವಲತಾಂಕ 0.6-1.6ರ ನಡುವೆ ವ್ಯತ್ಯಯವಾಗುತ್ತದೆ. ಇದಕ್ಕೊಂದು ಉಜ್ಜ್ವಲತಾಂಕ 5.5 ಇರುವ ಸಂಗಾತಿ ನಕ್ಷತ್ರವೂ ಇದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == : – ( )