== ವೇದ ಗಣಿತ == ವೇದ ಗಣಿತವೆಂಬುವುದು ಒಂದು ಪುರಾತನ ಗಣಿತದ ವಿಧಾನ. ಈ ಗಣಿತದ ಪ್ರಕಾರ ಗಣಿತದ ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಮನಸ್ಸಿನಲ್ಲೇ ಯೋಚಿಸಿ, ಬರವಣಿಗೆಯಿಲ್ಲದೇ ವೇಗವಾಗಿ ಬಗೆಹರಿಸಬಹುದು ಎಂದು ಹೇಳಲಾಗುತ್ತದೆ. ವೇದ ಗಣಿತದ ಪ್ರಕಾರ ಸಮಸ್ಯೆಗಳಿಗೆ ೧೬ ಸಂಸ್ಕೃತದ ಗಣಿತ ಸೂತ್ರಗಳಿಂದ ಹಾಗೂ ಅವುಗಳಿಂದ ವ್ಯುತ್ಪನ್ನವಾಗುವ ವೇದೀಯ ಪರಿಣಾಮಗಳಿಂದ ಪರಿಹಾರ ಕಂಡು ಹಿಡಿಯಬಹುದು. ಈ ಸೂತ್ರಗಳು ಕಳೆದು ಹೋಗಿದ್ದವೆಂದೂ ಹಾಗೂ ಇವುಗಳನ್ನು ಜಗದ್ಗುರು ಸ್ವಾಮಿ ಶ್ರೀ ಭಾರತೀ ಕೃಷ್ಣ ತೀರ್ಥಜಿ ಮಹಾರಾಜ ಎಂಬುವವರು ೧೯೧೧-೧೯೧೮ ರಲ್ಲಿ ಪುನ: ಪರಿಶೋಧನೆ ಮಾಡಿದರೆಂದೂ ಹೇಳಲಾಗುತ್ತದೆ. ಇವರ ಪ್ರಕಾರ ಇವರಿಗೆ ವೇದಾಧ್ಯಯನ ಮಾಡುವಾಗ ಸೂತ್ರಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತಂತೆ. ತಮ್ಮ ಪರಿಶೊಧನೆಯ ತಳಹದಿಯ ಮೇಲೆ ಶ್ರೀ ಭಾರತೀ ಕೃಷ್ಣ ತೀರ್ಥಜಿಯವರು ೧೯೫೭ ರಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಎಂಬ ಪುಸ್ತಕವನ್ನು ಬರೆದರು. ೧೯೬೦ ರಲ್ಲಿ ಶ್ರೀ ಭಾರತೀ ಕೃಷ್ಣ ತೀರ್ಥಜಿಯವರು ನಿಧನಹೊಂದಿದರು. ಈ ಪುಸ್ತಕವನ್ನು ೧೯೬೫ ರಲ್ಲಿ ಪ್ರಕಟಿಸಲಾಯಿತು. ವೇದಗಣಿತವಂಬ ಪ್ರಕಾರವೇ ಇಲ್ಲವೆಂದೂ, ಇದರ ಬಗ್ಗೆ ಯಾವ ವೇದದಲ್ಲೂ ಉಲ್ಲೇಖವೇ ಇಲ್ಲವೆಂದೂ ಹೇಳಲಾಗುತ್ತದೆ. ವೇದಗಣಿತದ ಆ ಹದಿನಾರು ಸೂತ್ರಗಳು ಹೀಗಿವೆ:: 11 === ಉಲ್ಲೇಖಗಳು === ://....// 2013-10-26 ವೇಬ್ಯಾಕ್ ಮೆಷಿನ್ ನಲ್ಲಿ. ://..//Vedic_Maths