ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲಿ ಒಬ್ಬರು ವೈ.ಆರ್.ಸ್ವಾಮಿ. == ಜನನ,ಬಾಲ್ಯ == ಹುಟ್ಟಿದ್ದು ಕರ್ನಾಟಕದ ಚಿತ್ರದುರ್ಗದಲ್ಲಾದರೂ ಬೆಳೆದದ್ದು ನೆರೆಯ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ.ಮೊದಲ ತೆಲುಗು ವಾಕ್ಚಿತ್ರದ ನಿರ್ದೇಶಕ ಹೆಚ್.ಎಂ.ರೆಡ್ಡಿ ಇವರ ಸಾಕುತಂದೆ. == ಬೆಳ್ಳಿತೆರೆಯ ನಂಟು == ಹೆಚ್.ಎಂ.ರೆಡ್ಡಿಯವರ ನಿರ್ದೇಶನದ ತೆಲುಗು ಚಿತ್ರ 'ಭಕ್ತ ಪ್ರಹ್ಲಾದ'ದಲ್ಲಿ ಪ್ರಹ್ಲಾದನ ಪಾತ್ರ ನಿರ್ವಹಿಸುವ ಮೂಲಕ ಸ್ವಾಮಿ ಬೆಳ್ಳಿತೆರೆಗೆ ಬಂದರು.ತಂದೆಯ ಸಹಾಯಕರಾಗಿ ದುಡಿದು,ಚಿತ್ರರಂಗದ ಅಪಾರ ಅನುಭವ ಗಳಿಸಿಕೊಂಡರು.ಸ್ನಾತಕೋತ್ತರ ಪದವಿ ಪಡೆದು,ಸರಕಾರದ ಉನ್ನತ ಹುದ್ದೆಯಲ್ಲಿದ್ದರು.ಆದರೆ ಚಿತ್ರರಂಗದ ಸೆಳೆತ,ಅವರನ್ನು ಆ ಹುದ್ದೆ ತ್ಯಜಿಸುವಂತೆ ಮಾಡಿತು.ಮೊದಮೊದಲು ತೆಲುಗು,ತಮಿಳು ಚಿತ್ರಗಳನ್ನು ನಿರ್ದೇಶಿಸುತ್ತಿದ್ದರು.ನಂತರ ತಮ್ಮ ಸ್ವಂತ ಲಾಂಛನ ರೋಹಿಣಿ ಫಿಲಂಸ್ ಮೂಲಕ ಕನ್ನಡ ಚಲನಚಿತ್ರ ರೇಣುಕಾ ಮಹಾತ್ಮೆ ನಿರ್ಮಿಸಿ,ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.ಸ್ವಾಮಿಯವರು ಒಟ್ಟಾರೆ ೩೮ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅವರ ಪ್ರತಿಯೊಂದು ಚಿತ್ರವೂ ವಿಶಿಷ್ಟವಾಗಿದೆ,ವಿಭಿನ್ನವಾಗಿದೆ. == ಇವರ ನಿರ್ದೇಶನದ ಕೆಲವು ಕನ್ನಡ ಚಲನಚಿತ್ರಗಳು - ವಿಶೇಷತೆ == ಭಕ್ತ ಕನಕದಾಸ - ಟ್ರಿಕ್ ಶಾಟ್‌ಗಳು ಹಾಗೂ ಸಂಗೀತ. ಸ್ವರ್ಣ ಗೌರಿ ಜೇನುಗೂಡು ದೇವರ ಮಕ್ಕಳು - ಮ.ನ.ಮೂರ್ತಿಯವರ ಮೀನಾ ಎಂಬ ಕಾದಂಬರಿ ಆಧಾರಿತ. ಸ್ವಯಂವರ - ಮ.ನ.ಮೂರ್ತಿಯವರ ಕಾದಂಬರಿ ಆಧಾರಿತ. ಮೂರೂವರೆ ವಜ್ರಗಳು - ಪೌರಾಣಿಕ ಚಿತ್ರ. ಸಿಪಾಯಿ ರಾಮು - ಇನ್ನು ಬರಲೆ ಯಮುನೆ ಎಂಬ ಕಾದಂಬರಿ ಆಧಾರಿತ ಚಿತ್ರ,ಚಂಬಲ್ ಕಣಿವೆಯ ಡಕಾಯಿತರನ್ನು ಕುರಿತದ್ದು. ಸವತಿಯ ನೆರಳು - ಆರ್ಯಾಂಬ ಪಟ್ಟಾಭಿಯವರ ಕಾದಂಬರಿ ಆಧಾರಿತ. ಮುರಿದ ಮನೆ ಕಠಾರಿವೀರ ಭಲೇ ರಾಜ ಭಲೇ ಹುಚ್ಚ ಬಿಡುಗಡೆ- ಕೊಲೆ ರಹಸ್ಯ ಮತ್ತು ಗಲ್ಲು ಶಿಕ್ಷೆ ಸಂಬಡಿತ ಕುತೂಹಲಕಾರಿ ಚಿತ್ರ ದೇವರ ಕಣ್ಣು- ಕೊಲೆ ರಹಸ್ಯದ ಚಿತ್ರ, ಬಂಗಾಲಿ ಕಾದಂಬರಿ ಆಧಾರಿತ. ರೋಮಾಂಚಕಾರಿ ಚಿತ್ರ ಅಪೂರ್ವ ಸಂಗಮ - ಹಿಂದಿ ಚಿತ್ರವನ್ನು ಆಧರಿಸಿದ್ದು,ಅವರ ನಿರ್ದೇಶನದ ಕೊನೆಯ ಚಿತ್ರ. == ಪ್ರಶಸ್ತಿ,ಗೌರವಗಳು == ೧೯೯೦-೯೧ - ಜೀವಮಾನದ ಸಾಧನೆಗೆ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ. ಭಕ್ತ ಕನಕದಾಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ. ವೈ.ಆರ್.ಸ್ವಾಮಿಯವರು ೨೦೦೨ರಲ್ಲಿ ವಿಧಿವಶರಾದರು.