ವೈ.ಕೆ.ಸಂಧ್ಯಾಶರ್ಮ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಪತ್ರಕರ್ತೆಯಾಗಿ ವೃತ್ತಿಜೀವನ ಆರಂಭಿಸಿದ ಶ್ರೀಮತಿ ಸಂಧ್ಯಾ, ಹವ್ಯಾಸಿ ರಂಗಭೂಮಿಯಲ್ಲಿ ಸಂಧ್ಯಾ ಕಲಾವಿದರು ತಂಡದ ಮೂಲಕ ಕ್ರಿಯಾಶೀಲರಾಗಿದ್ದಾರೆ. ಕಾದಂಬರಿ, ಸಣ್ಣಕಥೆ ಮತ್ತು ವಿಮರ್ಶೆ ಈ ಮೂರೂ ಪ್ರಕಾರಗಳಲ್ಲಿ ೫೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಲೇಖಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ. == ಕೃತಿಗಳು == === ಕಾದಂಬರಿ === ಪರಿವೇಷ ಪರಿಭ್ರಮಣ ಕವಣೆಗಿಟ್ಟ ಕಲ್ಲು ಕಾನನದ ನಡುವೆ ನೃತ್ಯ ಸರಸ್ವತಿ ಗುಪ್ತಗಾಮಿನಿ ಶ್ವೇತ ಮಹಲ್ ಬೊಗಸೆ ಬೆಲದಿಂಗಳು ನೆಲೆಗಾಣದ ಹಕ್ಕಿ ಪ್ರೇಮಚಂದನ ಬೆಳ್ಳಿಕಿರಣ ಮೋಡದ ನೆರಳು ಮನಸೇ ಒ ಮನಸೇ ಮಧು ಸಿಂಚನ ಕನಸಿಗೊಂದು ಕನ್ನಡಿ === ಕಥಾ ಸಂಕಲನ === ಕಿರುಗುಟ್ಟುವ ದನಿಗಳು ತಾಳ ತಪ್ಪಿದ ಮೇಳ ಬೆಳಕಿಂಡಿ === ವಿಚಾರ ಸಾಹಿತ್ಯ === ಮಹಿಳೆ ಮತ್ತು ಉದ್ಯೋಗ === ಜೀವನ ಚರಿತ್ರೆ === ಅಹಲ್ಯಾಬಾಯಿ ಹೋಳ್ಕರ === ಸಂಪಾದನೆ === ನಮ್ಮ ಲೇಖಕಿಯರು == ಪ್ರಶಸ್ತಿ == ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕರ್ನಾಟಕ ದಸರಾ ಪ್ರಶಸ್ತಿ, ಕನ್ನಡ ಲೇಖಕಿಯರ ಸಂಘದ ಪ್ರಶಸ್ತಿ, ಪಂಜೆ ಮಂಗೇಶರಾಯರ ಪ್ರಶಸ್ತಿ, ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ ಅಬ್ದುಲ್ ಕಲಾಮ್ ಪ್ರಶಸ್ತಿ, ‘ನಿದಂ’ ಸಂಸ್ಥೆಯಿಂದ ‘ವುಮನ್ ಅಚಿವರ್’ == ವೈಶಿಷ್ತ್ಯ == ಸಂಧ್ಯಾ ತಮ್ಮಜಾಲತಾಣದ ಮೂಲಕ ನೃತ್ಯ, ನಾಟಕಗಳ ವಿಮರ್ಶೆ ಮತ್ತು ಸಣ್ಣ ಕಥೆಗಳನ್ನು ಪ್ರಕಟಿಸುತ್ತಾ, ಇಂಟರ್ ನೆಟ್ ನಲ್ಲಿ ಸಹ ಛಾಪನ್ನು ಮೂಡಿಸಿದ್ದಾರೆ