ವೈಶಾಲಿ ಅಥವಾ ವೇಸಾಲಿ ಭಾರತದ ಇಂದಿನ ಬಿಹಾರ ರಾಜ್ಯದ ನಗರವಾಗಿತ್ತು. ಈಗ ಇದು ಪುರಾತತ್ವ ತಾಣವಾಗಿದೆ. ಇದು ತಿರ್ಹುತ್ ವಿಭಾಗದ ಭಾಗವಾಗಿದೆ. ಇದು ಕ್ರಿ.ಪೂ ೬ ನೇ ಶತಮಾನದ ಸುಮಾರು ಗಣರಾಜ್ಯದ ಮೊದಲ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ವಜ್ಜಿ ಮಹಾಜನಪದ (ವೃಜ್ಜಿ ಮಹಾಜನಪದ) ರಾಜಧಾನಿಯಾಗಿತ್ತು. ಗೌತಮ ಬುದ್ಧ ಕ್ರಿ.ಪೂ. ೪೮೩ರಲ್ಲಿ ತನ್ನ ಮರಣದ ಮೊದಲು ತನ್ನ ಕೊನೆಯ ಧರ್ಮೋಪದೇಶವನ್ನು ಇಲ್ಲಿ ನೀಡಿದ. ನಂತರ ಕ್ರಿ.ಪೂ. ೩೮೩ರಲ್ಲಿ ಎರಡನೇ ಬೌದ್ಧ ಪರಿಷತ್ತನ್ನು ಕಾಲಸೋಕ ರಾಜನು ಇಲ್ಲಿ ನಡೆಸಿದನು. ಹಾಗಾಗಿ ಇದು ಜೈನ ಮತ್ತು ಬೌದ್ಧ ಧರ್ಮ ಎರಡರಲ್ಲೂ ಪ್ರಮುಖ ಸ್ಥಾನವಾಗಿದೆ. ಇದು ಅತ್ಯುತ್ತಮವಾಗಿ ಸಂರಕ್ಷಿತವಾಗಿರುವ ಒಂದು ಅಶೋಕ ಸ್ತಂಭವನ್ನು ಹೊಂದಿದೆ. ಸ್ತಂಭದ ತುದಿಯಲ್ಲಿ ಒಂದು ಸಿಂಹವಿದೆ ( 26.014162° 85.109220°﻿ / 26.014162; 85.109220 ) . ಬೌದ್ಧಧರ್ಮ ಮತ್ತು ಜೈನ ಧರ್ಮದ ಆಗಮನಕ್ಕೂ ಮುಂಚೆಯೇ, ವೈಶಾಲಿಯು ಗಣತಂತ್ರವಾದಿ ಲಿಚ್ಚವಿ ರಾಜ್ಯದ ರಾಜಧಾನಿಯಾಗಿತ್ತು. ಆ ಅವಧಿಯಲ್ಲಿ, ವೈಶಾಲಿ ಒಂದು ಪ್ರಾಚೀನ ಮಹಾನಗರ ಮತ್ತು ವೈಶಾಲಿ ರಾಜ್ಯ ಗಣತಂತ್ರದ ರಾಜಧಾನಿಯಾಗಿತ್ತು. ಅದು ಇಂದಿನ ಬಿಹಾರ ರಾಜ್ಯದ ಹಿಮಾಲಯ ಗಂಗಾ ಪ್ರದೇಶದ ಬಹುಭಾಗವನ್ನು ಒಳಗೊಂಡಿತ್ತು. ಆದಾಗ್ಯೂ, ವೈಶಾಲಿಯ ಆರಂಭಿಕ ಇತಿಹಾಸದ ಬಗ್ಗೆ ಬಹಳ ಕಡಿಮೆ ತಿಳಿದುಬಂದಿದೆ. == ಉಲ್ಲೇಖಗಳು == == ಹೆಚ್ಚಿನ ಓದಿಗೆ == , (1986). . . , .. (2008). . . 978-81-313-0405-1. == ಹೊರಗಿನ ಕೊಂಡಿಗಳು == ವೈಶಾಲಿ Encyclopædia 2016-11-29 ವೇಬ್ಯಾಕ್ ಮೆಷಿನ್ ನಲ್ಲಿ. (399-414 )