ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು. == ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು == ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಅವರ್ಗೀಯ ವ್ಯಂಜನ 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. == ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ವ್ಯಂಜನಗಳ ವರ್ಗೀಕರಣ == == ಅಲ್ಪಪ್ರಾಣ == ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ == ಮಹಾಪ್ರಾಣ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ == ಅನುನಾಸಿಕ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಙ್ , ಞ್ , ಣ್ , ನ್, ಮ್ == ಉಲ್ಲೇಖ ==