ವ್ಯೂಹ ಎಂದರೆ - 'ಒಂದು ಯುದ್ಧ ರಚನೆಯಲ್ಲಿ ಸೇನಾಪಡೆಗಳನ್ನು ವ್ಯವಸ್ಥೆಗೊಳಿಸುವುದು', 'ವ್ಯವಸ್ಥೆಗೊಳಿಸುವುದು, ಕ್ರಮಗೊಳಿಸುವುದು, ಸರಿಯಾಗಿ ಜೋಡಿಸುವುದು, ಪ್ರತ್ಯೇಕಿಸುವುದು, ವಿಭಜಿಸುವುದು, ಮಾರ್ಪಡಿಸುವುದು, ಸ್ಥಳಾಂತರಿಸುವುದು, ಕ್ರಮಗೆಡಿಸುವುದು, (ಸ್ವರಗಳು, ಉಚ್ಚಾರಾಂಶಗಳು, ಇತ್ಯಾದಿಗಳನ್ನು) ತೀರ್ಮಾನಿಸುವುದು'. व्यः ಇದರ ಮೂಲವಾಗಿದೆ, ಇದರರ್ಥ 'ಹೊದಿಕೆ' ಅಥವಾ 'ಮುಸುಕು'. ಈ ಶಬ್ದವು ಹೊಮ್ಮುವಿಕೆ ಮತ್ತು ವಿಷ್ಣುವಿನ ವ್ಯಕ್ತ ಶಕ್ತಿಯನ್ನು ಕೂಡ ಸೂಚಿಸುತ್ತದೆ. ಶಾಸ್ತ್ರಗ್ರಂಥದ ಸಿದ್ಧಾಂತ ಮತ್ತು ಸಂದರ್ಭವನ್ನು ಅವಲಂಬಿಸಿ ಇದರ ಭಿನ್ನ ಅರ್ಥಗಳಿವೆ, ಉದಾಹರಣೆಗೆ ವೇದಗಳ ಜ್ಞಾನವನ್ನು ಬಹಿರಂಗಗೊಳಿಸುವುದು, ವಿಷ್ಣು ಅಥವಾ ಬುದ್ಧನ ಅಭಿವ್ಯಕ್ತಿ, ಮತ್ತು ಮಹಾಭಾರತದ ಯುದ್ಧ ರಚನೆಗಳು. == ಮಹಾಭಾರತದಲ್ಲಿ ವ್ಯೂಹದ ಪರಿಕಲ್ಪನೆ: ಯುದ್ಧ ರಚನೆಗಳು == ಮಹಾಭಾರತ ಮತ್ತು ಮನುಸಂಹಿತೆಯು ಅನೇಕ ವ್ಯೂಹಗಳನ್ನು ಪಟ್ಟಿಮಾಡುತ್ತದೆ, ಕೆಲವು ಚಿಕ್ಕದಾಗಿದ್ದವು ಮತ್ತು ಬೇರೆಯವು ಭಾರಿ ದೊಡ್ಡದಾಗಿದ್ದವು, ಉದಾಹರಣೆಗೆ : ಅರ್ಧಚಂದ್ರವ್ಯೂಹ . ಚಕ್ರವ್ಯೂಹ . ಗರ್ಭವ್ಯೂಹ . ಮಕರವ್ಯೂಹ . ಮಂಡಲವ್ಯೂಹ . ಊರ್ಮಿವ್ಯೂಹ . ಶಕಟವ್ಯೂಹ . ಸರ್ವತೋಭದ್ರವ್ಯೂಹ . ಸುಚಿವ್ಯೂಹ . ಶ್ಯೇನವ್ಯೂಹ. ವಜ್ರವ್ಯೂಹ. == ಉಲ್ಲೇಖಗಳು ==