ಶತಮಾನ - ನೂರು ವರ್ಷಗಳ ಅವಧಿಗೆ ಶತಮಾನ ಎನ್ನಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದಲ್ಲಿ ಈಗ ೨೧ನೇ ಶತಮಾನ ನಡೆಯುತ್ತಿದೆ. ಈ ಶತಮಾನವು ೨೦೦೧ನೇ ವರ್ಷದಲ್ಲಿ ಪ್ರಾರಂಭವಾಗಿದ್ದು, ೨೧೦೦ನೇ ವರ್ಷಕ್ಕೆ ಕೊನೆಗೊಳ್ಳುತ್ತದೆ. ಅದೇ ರೀತಿ ಇಪ್ಪತ್ತನೆಯ ಶತಮಾನವು ೧೯೦೧ರಲ್ಲಿ ಪ್ರಾರಂಭಗೊಂಡು, ೨೦೦೦ರಲ್ಲಿ ಕೊನೆಗೊಂಡಿತು. ಹತ್ತು ಶತಮಾನಗಳ ಅವಧಿಗೆ "ಸಾವಿರ ವರ್ಷಾವಧಿ" ಅಥವಾ "ಸಹಸ್ರ ವರ್ಷಾವಧಿ" (ಮಿಲ್ಲೇನ್ನಿಯಂ) ಎನ್ನುವರು. == ಇತರ ಕ್ಯಾಲೆಂಡರ್ ವ್ಯವಸ್ಥೆಗಳಲ್ಲಿ ಕಾಲದ ಘಟಕಗಳು == ಗ್ರೆಗೋರಿಯನ್ ಕ್ಯಾಲೆಂಡರ್ ಜೊತೆಗೆ ಜುಲಿಯನ್ ಕ್ಯಾಲಂಡರ್, ಅಜ್ಟೆಕ್ ಕ್ಯಾಲೆಂಡರ್ ಮತ್ತು ಹಿಂದೂ ಕ್ಯಾಲೆಂಡರ್'ಗಳೂ ಇಡೀ ವರ್ಷದ ಆವೃತ್ತಿಯ ಕಾಲಾವಧಿಯನ್ನು ರೇಖಿಸಲು ಬಳಸಲಾಗುತ್ತದೆ; ನಿರ್ದಿಷ್ಟವಾಗಿ, ಹಿಂದೂ ಕ್ಯಾಲೆಂಡರ್, ಅದರ ವರ್ಷಗಳನ್ನು ೬೦ ಗುಂಪುಗಳಾಗಿ ವಿಂಗಡಿಸಿದರೆ.., ಅಜ್ಟೆಕ್ ಕ್ಯಾಲೆಂಡರ್ ವರ್ಷಗಳನ್ನು ೫೨ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಪರಿಗಣಿಸಲಾಗಿದೆ. == ಇವನ್ನೂ ನೋಡಿ == ಇಪ್ಪತ್ತೊಂದನೆಯ ಶತಮಾನದ ವರ್ಷಗಳಲ್ಲಿನ ವಿದ್ಯಮಾನಗಳ ಲೇಖನಗಳು ಇಪ್ಪತ್ತನೆಯ ಶತಮಾನದ ವರ್ಷಗಳಲ್ಲಿನ ವಿದ್ಯಮಾನಗಳ ಲೇಖನಗಳು ಹತ್ತೊಂಬತ್ತನೆಯ ಶತಮಾನದ ವರ್ಷಗಳಲ್ಲಿನ ವಿದ್ಯಮಾನಗಳ ಲೇಖನಗಳು