ಶಾಂತಿಮರ (ತಾರೆ, ಗೋಟಿಂಗ) ದೊಡ್ಡಪ್ರಮಾಣದ ಮರ. ಶುಷ್ಕ ಹಾಗೂ ತೇವಪರ್ಣಪಾತಿ ಕಾಡುಗಳಲ್ಲಿ ಕಂಡು ಬರುವುದು. ಆಗ್ನೇಯ ಎಷಿಯಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಕೊಂಬ್ರೆಟೆಸಿ() ಕುಟುಂಬಕ್ಕೆ ಸೇರಿದ್ದು, ಟರ್ಮಿನಾಲಿಯ ಬೆಲೆರಿಕ ( )ಎಂದು ಸಸ್ಯಶಾಸ್ತ್ರೀಯ ಹೆಸರು. == ಸಸ್ಯದ ಗುಣಲಕ್ಷಣಗಳು == ದೊಡ್ಡಪ್ರಮಾಣದ ಮರ. ೩೦ ಮೀ.ರಷ್ಟು ಎತ್ತರ,೩ ಮೀ.ದಪ್ಪ ಬೆಳೆಯುತ್ತದೆ.ಎಲೆಗಳು ಅಗಲವಾಗಿ ಅಂಡವೃತ್ತಾಕಾರವಾಗಿರುವುದು. ರೆಂಬೆಗಳ ತುದಿಯಲ್ಲಿ ಗುಚ್ಚ ಗುಚ್ಚವಾಗಿರುವುದು.ಇದರ ಹಣ್ಣುಗಳು ಕೋತಿ, ಅಳಿಲು ಮುಂತಾದ ಪ್ರಾಣಿಗಳಿಗೆ ಮೆಚ್ಚಿನ ಆಹಾರ. ಇದರ ದಾರುವು ಹಳದಿ ಛಾಯೆಯ ಬೂದು ಬಣ್ಣದ್ದಾಗಿದೆ. ಬಾಳಿಕೆ ಬರುವುದಿಲ್ಲ. == ಉಪಯೋಗಗಳು == ಇದರ ದಾರುವು ನೀರಿನಲ್ಲಿ ಚೆನ್ನಾಗಿ ಬಾಳಿಕೆ ಬರುವುದರಿಂದ ದೋಣಿಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಪದರ ಹಲಗೆಗಳಿಗೆ,ನಿರ್ಮಾಣ ಕೆಲಸಗಳಲ್ಲಿ ತಾತ್ಕಾಲಿಕ ರಚನೆಗಳಿಗೆ ಉಪಯೋಗವಾಗುತ್ತದೆ. ಇದರ ಹಣ್ಣುಗಳಿಂದ ಟ್ಯಾನಿನ್ ದೊರಕುತ್ತದೆ. ಕಾಯಿಗಳನ್ನು ಬಟ್ಟೆ, ಚರ್ಮಗಳಿಗೆ ಬಣ್ಣ ಕೊಡಲು ಬಳಸುತ್ತಾರೆ. ಔಷಧಗಳಲ್ಲಿಯೂ ಉಪಯೋಗದಲ್ಲಿದೆ. == ಆಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ == ಉಲ್ಲೇಖಗಳು ==