ಶಾಕ್‍ಶುಕಾ (ಅರೇಬಿಕ್: شكشوكة) ಮೊಟ್ಟೆಗಳನ್ನು ಟೊಮೇಟೊಗಳು, ಆಲಿವ್ ಎಣ್ಣೆ, ಮೆಣಸು, ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸಾಸ್‍ನಲ್ಲಿ ಬೇಯಿಸಿ ತಯಾರಿಸಿಲಾಗುವ ಖಾದ್ಯವಾಗಿದೆ. ಸಾಮಾನ್ಯವಾಗಿ ಸಂಬಾರ ಪದಾರ್ಥಗಳಾದ ಜೀರಿಗೆ, ಕೆಂಪು ಮೆಣಸು, ಕಾಯೆನ್ ಮೆಣಸು ಮತ್ತು ಜಾಪತ್ರೆಯನ್ನು ಸೇರಿಸಲಾಗುತ್ತದೆ. ಈ ಖಾದ್ಯವು ಮೆಡಿಟರೇನಿಯನ್ ಸಂಸ್ಕೃತಿಗಳಲ್ಲಿ ಶತಮಾನಗಳಿಂದ ಅಸ್ತಿತ್ವದಲ್ಲಿದೆ. ಶಾಕ್‍ಶುಕಾದ ಕೆಲವು ರೂಪಗಳನ್ನು ಕೊಚ್ಚಿದ ಕುರಿಮರಿ ಮಾಂಸ, ಸುಟ್ಟ ಸಂಬಾರ ಪದಾರ್ಥಗಳು, ಮೊಸರು ಮತ್ತು ತಾಜಾ ಮೂಲಿಕೆಗಳಿಂದ ತಯಾರಿಸಬಹುದು. ಇತರ ರೂಪಗಳು ಫ಼ೆಟಾದಂತಹ ಉಪ್ಪುಪ್ಪಾದ ಗಿಣ್ಣುಗಳನ್ನು ಒಳಗೊಂಡಿರಬಹುದು. ಸಂಬಾರ ಪದಾರ್ಥಗಳಲ್ಲಿ ಪುಡಿಮಾಡಿದ ಹವೀಜ ಸೇರಿರಬಹುದು. ಟ್ಯುನೀಷಿಯಾದ ಬಾಣಸಿಗರು ಖಾದ್ಯಕ್ಕೆ ಆಲೂಗಡ್ಡೆ, ಚಪ್ಪಟೆ ಹುರುಳಿಕಾಯಿ, ಆರ್ಟಿಚೋಕ್ ತಿರುಳು ಅಥವಾ ಕಾರ್ಜೆಟ್‌ನ್ನು ಸೇರಿಸಬಹುದು. == ಉಲ್ಲೇಖಗಳು ==