ಶಾಮ ( ) ಇದು ಮುಖ್ಯವಾಗಿ ದಕ್ಷಿಣ ಏಷಿಯಾದ ಹಕ್ಕಿ. ಭಾರತದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡು ಬರುತ್ತದೆ. === ವೈಜ್ಞಾನಿಕ ಹೆಸರು === ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿದ್ದು, ಪಿಟ್ಟಿಡೇ ಕುಟುಂಬದ ಹಕ್ಕಿ. ಕಾಪ್ಸಿಕಸ್ ಮಲಬಾರಿಕಸ್ ಎಂಬುದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಶಾಮಾ ಎನ್ನುತ್ತ್ತಾರೆ. === ಲಕ್ಷಣಗಳು === ಗೊರವಂಕ ಪಕ್ಷಿಗಿಂತ ಸ್ವಲ್ಪ ಚಿಕ್ಕದಾದ ಪಕ್ಷಿ.ಹೊಟ್ಟೆ ಹಾಗೂ ತಳ ಭಾಗ ಕಂದು ಬಣ್ಣ. ಉದ್ದನೆಯ ಕಪ್ಪು ಬಾಲ. ಬಾಲದ ಅಂಚು ಬಿಳಿಯಾಗಿರುತ್ತದೆ. ಚಿಕ್ಕ ಕಾಲುಗಳು.ಕೆಳ ಬೆನ್ನಿನ ಮೇಲೆ ಬೆಳ್ಳಗಿನ ಪುಕ್ಕಗಳಿರುತ್ತವೆ.ಇಂಪಾದ ಕೂಗು ಇದೆ. === ಆವಾಸ === ನಿತ್ಯ ಹರಿದ್ವರ್ಣಕಾಡುಗಳಲ್ಲಿ , ಪರ್ಣಪಾತಿ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಮರಗಳ ಪೊಟರೆಗಳಲ್ಲಿ ವಾಸಿಸುತ್ತವೆ. === ಆಧಾರ === ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್ === ಬಾಹ್ಯ ಸಂಪರ್ಕಗಳು === - - 2005-04-06 ವೇಬ್ಯಾಕ್ ಮೆಷಿನ್ ನಲ್ಲಿ. - , & 2016-05-31 ವೇಬ್ಯಾಕ್ ಮೆಷಿನ್ ನಲ್ಲಿ.