ಶಿರಹಟ್ಟಿ - ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು. ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ. ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ. == ಇತಿಹಾಸ == ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ. ೩೦೦ ವರ್ಷಗಳ ಪ್ರಾಚಿನ ಇತಿಹಾಸ ಹೊಂದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠವೂ ಶಿರಹಟ್ಟಿಯಲ್ಲಿದೆ. == ಸುತ್ತ ಮುತ್ತ == ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ ೮ಕಿ.ಮೀ ದೂರದಲ್ಲಿದೆ. ೩೫ ಹೆಕ್ಟೇರ್ ಜಾಗೆಯಲ್ಲಿ ಈ ಕೆರೆ ವ್ಯಾಪಿಸಿದ್ದು, ಸುಮಾರು ೧೩೦ ಜಾತಿಯ ೫೦೦೦ ಪಕ್ಷಿಗಳು ಪ್ರತಿವರ್ಷ ವಲಸೆ ಬರುತ್ತವೆ. ಇಲ್ಲಿ ಪ್ರಮುಖವಾಗಿ ಗೀರು ತಲೆಯ ಬಾತುಕೋಳಿಗಳು ಹೆಚ್ಚು. ಇದು ಅಕ್ಟೋಬರ್ ದಿಂದ ಫೆಬ್ರುವರಿಯವರೆಗೆ ಪಕ್ಷಿಗಳು ತುಂಬಿರುತ್ತವೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡದ ಸರಹದ್ದು ಹೊಂದಿದೆ. == ಉಲ್ಲೇಖಗಳು ==