ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ. ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ. == ಚರಿತ್ರೆ == ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು. == ಪ್ರವಾಸೀ ತಾಣಗಳು == == ವಿಮಾನ ನಿಲ್ದಾಣ == ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲುದಾರರ ಜೊತೆ ಅಭಿಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು. ೨೦೨೦ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿದರು. ೨೮ ಫೆಬ್ರವರಿ ೨೦೨೩ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿತು. == ಕುವೆಂಪು ವಿಶ್ವವಿದ್ಯಾನಿಲಯ == ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ. == ಗಿರಿ-ಶಿಖರಗಳು == ಆಗುಂಬೆ, ಸೂರ್ಯಾಸ್ತಕ್ಕೆ ವಿಶ್ವಪ್ರಸಿದ್ದ ಕೊಡಚಾದ್ರಿ ಕುಂದಾದ್ರಿ ಬೆಟ್ಟ. ~ಜೈನ ಕ್ಷೇತ್ರ ಬರೆಕಲ್ ಬತೆರಿ ನಿಶಾನೆ ಗುಡ್ಡ ಹೆದ್ದಾರಿಖಾನ್ ಮೊಳಕಾಲ್ಮುರಿ ಗುಡ್ಡ ಜೊಗಿ ಗುಡ್ಡ ಮುಪ್ಪಾನೆ == ನದಿಗಳು == ತುಂಗಾ ಭದ್ರಾ ಶರಾವತಿ ಕುಮುದ್ವತಿ ವೇದಾವತಿ ವರದ ನದಿ ಕುಶಾವತಿ ದ೦ಡಾವತಿ ನದಿ ಮಾಲತಿ ಸೀತಾ == ಚರಿತ್ರೆ ಮತ್ತು ಧರ್ಮ == ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು ನಗರ, ಬಿದನೂರು ಸಂಸ್ಥಾನದ ರಾಜಧಾನಿ ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ ಶಿವಪ್ಪ ನಾಯಕನ ಅರಮನೆ ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್ ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ. ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ. ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ. ನಾಡಕಲಸಿ ಸಾಗರ ತಾಲ್ಲೂಕು; ಪ್ರಾಚೀನ ದೇವಾಲಯ ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ತೀರ್ಥಹಳ್ಳಿ ಬಳಿ. ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ ಸ್ಥಳ. == ವನ್ಯಜೀವಿ == ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ ಸಕ್ಕರೆಬೈಲು, ಆನೆ ತರಬೇತಿ ಶಿಬಿರ ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ ಸೊರಬ ತಾಲ್ಲೂಕಿನ ಚೀಲನೂರು ಕಾಡು ನವಿಲುಗಳ ವಾಸಸ್ಥಾನ == ಐತಿಹಾಸಿಕ ವ್ಯಕ್ತಿಗಳು == ಕೆಳದಿಯ ಚೆನ್ನಮ್ಮಾಜಿ ಅಲ್ಲಮಪ್ರಭು ದೇವರು ಕೆಳದಿ ಶಿವಪ್ಪ ನಾಯಕ ಅಕ್ಕಮಹಾದೇವಿ == ಪ್ರಮುಖ ವ್ಯಕ್ತಿಗಳು == ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ. ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯವಸ್ತುತಜ್ಞ ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಪಿ.ಲಂಕೇಶ್, ಲೇಖಕ-ಪತ್ರಕರ್ತರು ನಾ. ಡಿಸೋಜ, ಸಾಹಿತಿ ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ ಜಿ. ಎಸ್. ಶಿವರುದ್ರಪ್ಪ, ಕವಿ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಕವಿ ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು ಸುದೀಪ್, ಚಲನಚಿತ್ರ ನಟ == ತಾಲ್ಲೂಕುಗಳು == == ಜನಸಂಖ್ಯೆ == ೨೦೧೧ರ ಜನಗಣತಿಯ ಪ್ರಕಾರ ಶಿವಮೊಗ್ಗ ಜಿಲ್ಲಾ ಜನಸಂಖ್ಯಾ ವಿವರ == ಉಲ್ಲೇಖಗಳು == == ಇದನ್ನೂ ನೋಡಿ == ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ) == ಹೊರಗಿನ ಸಂಪರ್ಕಗಳು == ಶಿವಮೊಗ್ಗ ಗ್ಲೋರಿ ಶಿವಮೊಗ್ಗ ಮಹಾನಗರಪಾಲಿಕೆ 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. ಶಿವಮೊಗ್ಗ ಜಿಲ್ಲಾ ಪಂಚಾಯತ್ 2009-01-19 ವೇಬ್ಯಾಕ್ ಮೆಷಿನ್ ನಲ್ಲಿ. ಶಿವಮೊಗ್ಗದ ಬಗ್ಗೆ ಮಾಹಿತಿ ಶಿವಮೊಗ್ಗ ಜಿಲ್ಲೆಯ ನಕ್ಷೆ