ಶಿಶುಪ್ರಾಸಗಳು ಮಾತು ಬರುವ ಮಕ್ಕಳು ಪರಸ್ಪರ ಕಲಿತು ಹೇಳಿ ಕೊಳ್ಳುವಂತಹ ಪದ್ಯರೂಪದ ಜ್ಞಾನಶಾಖೆಗಳು. ಇದೊಂದು ಕಂಠಸ್ಥ ಸಂಪ್ರದಾಯದ ಪಳೆಯುಳಿಕೆ. ಮಕ್ಕಳಿಗೆ ಸಂಬಂಧಿಸಿದ ಪರಂಪರಾಗತ ಜ್ಞಾನವು ಪದ್ಯರೂಪದಲ್ಲಿ ಹೊರಹೊಮ್ಮಿ ಗೀತೆಗಳಂತೆ ಕಂಡು ಬಂದಿರುವುದರಿಂದ ಇವನ್ನು ಶಿಶುಗೀತೆ, ಮಕ್ಕಳಹಾಡು ಎಂದು ಕರೆಯುತ್ತಾರೆ. == ಶಿಶುಪ್ರಾಸಗಳ ಉಗಮ == ಜನಪದ ಗೀತಾತ್ಮಕ ಭಾಗ ಜೀವನದ ನಾನಾ ಹಂತಗಳಲ್ಲಿ, ನಾನಾ ಘಟ್ಟಗಳಲ್ಲಿ ಹರಡಿರುವಂತಹುದು. ಇದೊಂದು ಕಂಠಸ್ಥ ಸಂಪ್ರದಾಯದ ಪಳೆಯುಳಿಕೆ. ಶಿಶುಪ್ರಾಸಗಳು ಮಾತು ಬರುವ ಮಕ್ಕಳು ಪರಸ್ಪರ ಕಲಿತು ಹೇಳಿ ಕೊಳ್ಳುವಂತಹ ಪದ್ಯರೂಪದ ಜ್ಞಾನಶಾಖೆಗಳು. ಭಾಷೆಯಲ್ಲಿನ ಅತ್ಯಂತ ವಿನೋದದ ಪದ್ಯಭಾಗವೇ ಶಿಶುಪ್ರಾಸಗಳಾಗಿವೆ. ಇಂಗ್ಲೀಷಿನ 'ನರ್ಸರಿ ರೈಮ್ಸ್ 'ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ 'ಶಿಶುಪ್ರಾಸಗಳು' ಎಂಬ ಪದವನ್ನು ಮೊದಲಿಗೆ ಬಳಸಿದವರು ಡಾ.ಹಾ.ನಾಯಕ್ ಅವರು. ಇವರು ತಮ್ಮ 'ವಿಲಿಯಂ ಥಾಂಸ್ ಮತ್ತು ಫೋಕ್ ಲೋರ್ ' ಎಂಬ ಲೇಖನದಲ್ಲಿ ಈ ಪದವನ್ನು ಬಳಸಿದ್ದಾರೆ. ಮಕ್ಕಳಿಗೆ ಸಂಬಂಧಿಸಿದ ಪರಂಪರಾಗತ ಜ್ಞಾನವು ಪದ್ಯರೂಪದಲ್ಲಿ ಹೊರಹೊಮ್ಮಿ ಗೀತೆಗಳಂತೆ ಕಂಡು ಬಂದಿರುವುದರಿಂದ ಇವನ್ನು ಶಿಶುಗೀತೆ, ಮಕ್ಕಳಹಾಡು ಎಂದು ಕರೆಯುತ್ತಾರೆ. ಆದರಿಲ್ಲಿ ಶಿಶುಪ್ರಾಸಗಳು ಎಂಬ ಹೆಸರಿರುವುದಕ್ಕೆ ಮುಖ್ಯ ಕಾರಣವೆಂದರೆ ಈ ಪದ್ಯದಲ್ಲಿ ಅರ್ಥ ಬಹುತೇಕ ಗೌಣವಾಗಿರುತ್ತದೆ. ಸಾಲುಗಳು ಕ್ರಮಬದ್ಧವಾಗಿ ಇರುವುದಿಲ್ಲ. ಪ್ರಾಸ, ಯಮಕಾದಿಗಳು ಶಿಶುಪ್ರಾಸಗಳನ್ನು ಮುನ್ನಡೆಸುತ್ತವೆ. ಹಾಡುವುದರೊಂದಿಗೆ ಇವು ವಿಸ್ತೃತ ಮನೋರಂಜನೆಯನ್ನು ಒದಗಿಸುತ್ತವೆ. ಇಂತಹ ಪ್ರಾಸಗಳಲ್ಲಿ ಎರಡು ಬಗೆಗಳಿವೆ. ೧)ಶಿಶುಪ್ರಾಸಗಳು, ೨)ಶಾಲಾಪ್ರಾಸಗಳು. ಇವುಗಳ ವಸ್ತು ಮತ್ತು ಸ್ವರಗತಿಗಳೆರಡರಲ್ಲಿಯೂ ಸಾಕಷ್ಟು ವ್ಯತ್ಯಾಸಗಳಿವೆ. ಜೊತೆಗೆ ಈ ಗೀತೆಗಳ ವಾಹಕತ್ವ ಕೂಡ ಭಿನ್ನ ರೀತಿಯಲ್ಲಿದೆ. ಅನುರಣಿತ ಧ್ವನಿ ಸಂಯೋಜನೆಯೇ ಈ ಪದ್ಯ ರಚನೆಯ ಪ್ರಧಾನ ಲಕ್ಷಣ. ಅಣಕ, ಅಸಂಬದ್ದತೆ, ಅನೌಚಿತ್ಯ, ವಿಡಂಬನೆ, ಹಾಸ್ಯ, ಚಮತ್ಕಾರ ಮೊದಲಾದ ರಂಜನೀಯ ವಿಷಯಗಳೆಲ್ಲ ಶಿಶುಪ್ರಾಸಗಳ ವಸ್ತುಗಳಾಗಿವೆ. ಮಕ್ಕಳ ಇಂತಹ ಪ್ರಾಸಗಳಿಗೆ ಒಂದು ಅವಿಚ್ಛಿನ್ನತೆ ಇರುತ್ತದೆ. ಇವು ಎರಡು ಸಾಲಿನ ಪದ್ಯದಿಂದಿಡಿದು ೧೫ಸಾಲಿನ ಪದ್ಯದವರೆಗೂ ಕಂಡು ಬರುತ್ತವೆ. == ಪ್ರಸ್ತುತ ಸಂದರ್ಭದಲ್ಲಿ ಶಿಶುಪ್ರಾಸಗಳು == ಶಿಶುಪ್ರಾಸಗಳು ಜನಪದರ ಆಕಸ್ಮಿಕ ಸೃಷ್ಟಿಯಲ್ಲ. ಇವುಗಳ ಹಿಂದೆ ನಿರ್ಧಿಷ್ಟ ಕಾರಣಗಳಿರುವಂತೆ ಭಾಸವಾಗುತ್ತದೆ. ಇವು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿವೆ. ಇವುಗಳಲ್ಲಿ ಕೆಲವು ಪ್ರಾಚೀನ ರಚನೆಗಳನ್ನು ಉಳಿಸಿ ಕೊಂಡಿವೆ. ಉಳಿದವು ಭಾಷೆಯಿಂದ ಭಾಷೆಗೆ, ಪ್ರದೇಶದಿಂದ ಪ್ರದೇಶಕ್ಕೆ ವರ್ಗಾಯಿಸಲ್ಪಟ್ಟಿವೆ. ಶಿಶುಪ್ರಾಸಗಳು ಪದಗಳ ಅನುರಣ ಸಂಬಂಧದಿಂದಾಗಿ ಆರ್ಥಾಂತರ ಪಡೆಯುತ್ತವೆ. ಈಗಿನ ಮಕ್ಕಳ ಮನಸ್ಥಿತಿ, ಕಾರ್ಯಚಟುವಟಿಕೆಗಳು ಬೇರೆ ತೆರನಾಗಿ ಇರುವುದರಿಂದ ಇಂದು ಶಿಶುಪ್ರಾಸಗಳು ಕಮರಿ ಹೋಗುವ ಹಂತದಲ್ಲಿವೆ. ಹೀಗಾದರೆ ಮುಂದೊಂದು ದಿನ ಅವುಗಳ ಅವಶೇಷಗಳು ಮಾತ್ರ ಉಳಿಯಬಹುದು. == ಶಿಶುಪ್ರಾಸಗಳು == == ಶಾಲಾಶಿಶುಪ್ರಾಸಗಳು == == ಆಕರ ಗ್ರಂಥ == ಜಾನಪದ ತತ್ವಾರ್ಥ ಪ್ರವೇಶ -ರಾಗೌ ಜಾನಪದ ಸಿರಿ-ಡಾ.ಎಂ.ನಂಜಯ್ಯ ಹೊಂಗನೂರು == ಉಲ್ಲೇಖಗಳು ==