ಶುಭಮಂಗಳ ಚಿತ್ರವನ್ನು ೧೯೭೫ರಲ್ಲಿ 'ರಘುನಂದನ್ ಇಂಟರ್ ನ್ಯಾಷನಲ್' ಸಂಸ್ಥೆಗೆ ಪುಟ್ಟಣ್ಣ ಕಣಗಾಲ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರು. ಮೂಲ ಕಾದಂಬರಿಯನ್ನು 'ವಾಣಿ'ಯವರು ರಚಿಸಿದಾರೆ. ಸಂಭಾಷಣೆ ಬೀಚಿ ಮತ್ತು ಯೋಗಾನರಸಿಂಹ ಅವರದು. ಸಂಗೀತ ವಿಜಯಭಾಸ್ಕರ್ ಅವರದು. ಹಿನ್ನೆಲೆ ಗಾಯನ, ಪಿ.ಬಿ. ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಯರಾಂ, ಸುದರ್ಶನ್, ಮತ್ತು ರವಿ. ಈ ಚಿತ್ರದ ತಾರಾಗಣದಲ್ಲಿ, ಶ್ರೀನಾಥ್, ಆರತಿ, ಸೀತಾರಾಂ, ಅಂಬರೀಶ್, ಶಿವರಾಂ, ಆಶ್ವಥ್, ಜಯರಾಂ, ಲೋಕನಾಥ್, ಮತ್ತು ಬಿ.ವಿ.ರಾಧ ಅವರಿದ್ದಾರೆ.