ಶೋರ್ಮಾ ಮಧ್ಯಪ್ರಾಚ್ಯದ ಪಾಕಪದ್ಧತಿಯ ಒಂದು ಖಾದ್ಯ. ಇದು ತೆಳು ಹೋಳುಗಳಾಗಿ ಕತ್ತರಿಸಿದ ಮಾಂಸವನ್ನು ಹೊಂದಿರುತ್ತದೆ, ಈ ಹೋಳುಗಳನ್ನು ಶಂಕುವಿನಂತಹ ಆಕಾರದಲ್ಲಿ ಗುಡ್ಡೆಹಾಕಿ ನಿಧಾನವಾಗಿ ತಿರುಗುವ ಲಂಬ ರೋಟಿಸರಿ ಅಥವಾ ಸಲಾಕೆಯ ಮೇಲೆ ಸುಡಲಾಗುತ್ತದೆ. ಮೂಲತಃ ಇದನ್ನು ಕುರಿಮರಿಮಾಂಸ ಅಥವಾ ಮೇಕೆಮಾಂಸದಿಂದ ತಯಾರಿಸಲಾಗುತ್ತಿತ್ತು. ಇಂದು ಶೋರ್ಮಾವನ್ನು ಕೋಳಿಮಾಂಸ, ಟರ್ಕಿಕೋಳಿಯ ಮಾಂಸ, ಗೋಮಾಂಸ ಅಥವಾ ಕರುವಿನ ಮಾಂಸದಿಂದ ತಯಾರಿಸಬಹುದು. ಬೆಂದ ಮೇಲ್ಮೈಯು ನಿರಂತರವಾಗಿ ತಿರುಗುತ್ತಿರುವಾಗ ತೆಳುವಾದ ತುಂಡುಗಳನ್ನು ಅದರಿಂದ ಹೆರೆಯಲಾಗುತ್ತದೆ. ಶೋರ್ಮಾ ವಿಶ್ವದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ, ವಿಶೇಷವಾಗಿ ಈಜಿಪ್ಟ್‌ನಲ್ಲಿ. ಭಾರತದ ಹೈದರಾಬಾದ್‍ನಲ್ಲಿ ಇದು ಜನಪ್ರಿಯವಾಗಿದೆ. == ಉಲ್ಲೇಖಗಳು ==