ಶ್ಯಾಮಲಾಂಗಿ ಅಥವಾ ಶಾಮಲಾಂಗಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೫ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಶಾಮಲಮ್ ಎಂದು ಹೆಸರಿಸಿದ್ದಾರೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹತ್ತನೆಯ ದಿಸಿ ಚಕ್ರದ ಒಂದನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಪಾ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧ ನ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೨ ಪ ದ೧ ನಿ೧ ಸ ಅವರೋಹಣ ಸ ನಿ೧ ದ೧ ಪ ಮ೨ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಶುದ್ಧ ನಿಷಾಧ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಶ್ಯಾಮಲಾಂಗಿ ರಾಗದಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ವೀರ ರಾಘವ- ಕೋಟೀಶ್ವರ ಐಯ್ಯರ್ ವಿನತಿ ಚಕೋನವಯ್ಯ -ಎಂ. ಬಾಲಮುರಳಿ ಕೃಷ್ಣ ನಮೋ ನಮಸ್ತೆ ಗೀರ್ವಾಣಿ - ಮುತ್ತುಸ್ವಾಮಿ ದೀಕ್ಷಿತರು ಶ್ಯಾಮಲಾಂಗಿ ಮಾತಂಗಿ - ಮುತ್ತುಸ್ವಾಮಿ ದೀಕ್ಷಿತರು == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಶ್ಯಾಮಲಾಂಗಿ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ವಿಶ್ವಾಂಬರಿ ಮತ್ತು ಗಾನಮೂರ್ತಿ == ಉಲ್ಲೇಖಗಳು ==