ಶ್ರೀಕಂಠ 2017ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಮಂಜು ಸ್ವರಾಜ್ ಅವರು ಬರೆದು ನಿರ್ದೇಶಿಸಿದ್ದಾರೆ. ಎಂ.ಎಸ್.ಮನು ಗೌಡ ಅವರ ನಿರ್ಮಿಸಿರುವ ಈ ಚಿತ್ರವು 6 ಜನವರಿ 2017ರಂದು ಬಿಡುಗಡೆಯಾಯಿತು.1985ರಲ್ಲಿ ಪ್ರಕಟವಾಗಿದ್ದ ನಾಗತಿಹಳ್ಳಿ ಚಂದ್ರಶೇಖರ ಅವರ ಚಿಕ್ಕ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಪ್ರಮುಖ ಪಾತ್ರಗಳಲ್ಲಿ ಶಿವರಾಜ್ ಕುಮಾರ್, ಚಾಂದಿನಿ ಶ್ರೀಧರನ್ ಮತ್ತು ವಿಜಯ್ ರಾಘವೇಂದ್ರ ನಟಿಸಿದ್ದಾರೆ. == ==