ಶ್ರೀಲಲಿತ ಕನ್ನಡದ ಚಲನಚಿತ್ರ ನಟಿ. ೧೯೭೦ರಲ್ಲಿ ತೆರೆಗೆ ಬಂದ ಸೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೀಲಲಿತ ಆನಂತರದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಳ್ಳಿ ಪಾಂಡವರು(೧೯೭೮) ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡದ ಶ್ರೀಲಲಿತ ಅವರ ಕೆಲವು ಮಹತ್ವದ ಚಿತ್ರಗಳೆಂದರೆ ನಾಡಿನ ಭಾಗ್ಯ(೧೯೭೧) ಅಪರಿಚಿತ(೧೯೭೮), ಸುಬ್ಬಿ ಸುಬ್ಬಕ್ಕ ಸುವ್ವಲಾಲಿ(೧೯೮೦), ಮಾಯೆಯ ಮುಸುಕು(೧೯೮೦), ಬಾಳು ಬಂಗಾರ(೧೯೮೧) ಮತ್ತು ಹೆಂಡ್ತೀರೆ ಹುಷಾರ್. ಪ್ರಸಿದ್ಧ ನಿರ್ದೇಶಕ ಬಸವರಾಜ್ ಕೆಸ್ತೂರ್ ಅವರ ವಿಭಿನ್ನ ಚಿತ್ರಗಳಾದ ನಂಜುಂಡ ನಕ್ಕಾಗ(೧೯೭೫), ಸಂಘರ್ಷ(೧೯೭೭) ಮತ್ತು ಸ್ವಾಮೀಜಿ(೧೯೮೦) ಚಿತ್ರಗಳಲ್ಲಿ ನಾಯಕಿಯಾಗಿ ವಿಶಿಷ್ಠ ಅಭಿನಯ ನೀಡಿದ್ದಾರೆ. ಜನಪ್ರಿಯ ನಟರಾದ ಮಾನು ಅವರೊಂದಿಗೆ ಶ್ರೀ ರಾಘವೇಂದ್ರ ಕರುಣೆ(೧೯೮೦) ಮತ್ತು ಮೈಲಾರ ಲಿಂಗ(೧೯೮೯) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜನಪ್ರಿಯ ನಟರಾದ ರಾಜೇಶ್, ಸುದರ್ಶನ್, ಶ್ರೀನಾಥ್, ಗಂಗಾಧರ್, ಅಂಬರೀಶ್, ಶ್ರೀನಿವಾಸಮೂರ್ತಿ, ಮಾನು, ರಾಮ್ ಗೋಪಾಲ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ. == ಶ್ರೀಲಲಿತ ಅಭಿನಯದ ಚಿತ್ರಗಳು == == ಉಲ್ಲೇಖಗಳು ==