ಶ್ರೀವತ್ಸ ವೆಂಬುದು ವಿಷ್ಣುವಿನ ಎದೆಯ ಮೇಲಿರುವ ಲಕ್ಷ್ಮಿಯ ವಾಸಸ್ಥಾನವಾದ ಒಂದು ಮಚ್ಚೆ. ಜೈನರಿಗೂ ಮಂಗಲಕರವಾದ ಈ ಚಿಹ್ನೆ ತೀರ್ಥಂಕರರ ಎದೆಯ ಮೇಲೆ ಇರುತ್ತದೆ. ಬೌದ್ಧರ ಅಷ್ಟಮಂಗಳಗಳಲ್ಲಿ ಇದೂ ಒಂದು. ಕೊನೆಯಿಲ್ಲದ ಹಗ್ಗದಂತೆ ಇದನ್ನು ಚಿತ್ರಿಸಲಾಗುತ್ತದೆ.