ಷಣ್ಮುಖಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೬ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಚಾಮರಮ್ ಎಂದು ಹೆಸರಿಸಿದ್ದಾರೆ. ಷಣ್ಮುಖ ಮತ್ತು ಶಿವನನ್ನು ಸ್ತುತಿಸುವ ಹಲವಾರು ಕೃತಿಗಳು ಈ ರಾಗದಲ್ಲಿದೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹತ್ತನೆಯ ದಿಸಿ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಶ್ರಿ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧ ನಿ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೨ ಪ ದ೧ ನಿ೨ ಸ ಅವರೋಹಣ ಸ ನಿ೨ ದ೧ ಪ ಮ೨ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೨೦ನೆಯ ಮೇಳಕರ್ತ ರಾಗವಾದ ನಟಭೈರವಿ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಷಣ್ಮುಖಪ್ರಿಯ ರಾಗದಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ವದ್ದನೆ ವಾರು- ತ್ಯಾಗರಾಜ ಮರಿವೆರೆ ದಿಕ್ಕೇವರಯ್ಯಾ- ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಪಾರ್ವತಿ ನಾಯಕನೆ, ಸರವಣಭವ ಎನ್ನುಮ್, ಅಂದಾವನೆ ಉನ್ನೈ- ಪಾಪನಾಶಮ್ ಸಿವನ್ ಅಭಿಮಾನಮುತೊ ನನ್ನುಬ್ರೊವರಾಧ- ಮೈಸೂರು ವಾಸುದೇವಾಚಾರ್ಯ ವಲ್ಲಿ ನಾಯಕನೆ - ಮುತ್ತಯ್ಯ ಭಾಗವತರು ವಿಲಾಯದ ಇದು ನೇರಮ- ಟಿ.ಎನ್.ಬಾಲ ಸದಾ ತವ ಪಾದ ಸನ್ನಿಧಿಮ್- ಎಂ. ಬಾಲಮುರಳಿ ಕೃಷ್ಣ ಓಂಕಾರ ಪ್ರಣವ, ಪದ ವರ್ಣ- ಎಂ. ಬಾಲಮುರಳಿ ಕೃಷ್ಣ ಸಿದ್ಧಿ ವಿನಾಯಕಮ್,- ಮುತ್ತುಸ್ವಾಮಿ ದೀಕ್ಷಿತರು == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಷಣ್ಮುಖಪ್ರಿಯ ರಾಗಕ್ಕೆ ಅನ್ವಯಿಸಿದಾಗ ಮೂರು ರಾಗಗಳು ದೊರೆಯುತ್ತದೆ.ಅವುಗಳು ಶೂಲಿನಿ. ಧೇನುಕ ಮತ್ತು ಚಿತ್ರಾಂಬರಿ == ಉಲ್ಲೇಖಗಳು ==